Monday, July 20, 2026
spot_imgspot_img
spot_imgspot_img

ದೆಹಲಿ ಶಾಲೆಗಳಲ್ಲಿ ಗಂಟೆಗೊಮ್ಮೆ ವಾಟರ್ ಬೆಲ್, ಹೊರಾಂಗಣದಲ್ಲಿ ಪ್ರಾರ್ಥನೆಗೆ ಬ್ರೇಕ್

- Advertisement -
- Advertisement -

ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಹೆಚ್ಚುತ್ತಿರುವ ಬಿಸಿಲು ಹಾಗೂ ಹೀಟ್‌ವೇವ್‌ನಿಂದಾಗಿ ದೆಹಲಿ ಶಾಲೆಗಳಲ್ಲಿ ಪ್ರತಿ ಗಂಟೆಗೊಮ್ಮೆ ನೀರಿನ ಬ್ರೇಕ್ ಹಾಗೂ ಬೆಳಗಿನ ಜಾವ ಹೊರಾಂಗಣದಲ್ಲಿ ಪ್ರಾರ್ಥನೆ ಮಾಡುವುದನ್ನು ರದ್ದುಗೊಳಿಸಿದೆ.

ವಿದ್ಯಾರ್ಥಿಗಳು ಹೆಚ್ಚಾಗಿ ಬಿಸಿಲಿನಲ್ಲಿರುವುದನ್ನು ತಪ್ಪಿಸಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ದೆಹಲಿ ಶಾಲೆಗಳಲ್ಲಿ ಬೆಳಗಿನ ಜಾವ ಹೊರಾಂಗಣದಲ್ಲಿ ಪ್ರಾರ್ಥನೆ ಮಾಡುವುದನ್ನು ರದ್ದುಗೊಳಿಸಿದೆ. ಇದರ ಬದಲಿಗೆ ನೆರಳಿನಲ್ಲಿ ಅಥವಾ ಒಳಾಂಗಣ ಪ್ರದೇಶದಲ್ಲಿ ಪ್ರಾರ್ಥನೆ ಮಾಡಬಹುದು ಎಂದು ತಿಳಿಸಿದೆ.

ಇನ್ನೂ ಕ್ಲಾಸ್ ನಡೆಯುತ್ತಿರುವ ಸಮಯದಲ್ಲಿ ಮಕ್ಕಳು ಪದೇ ಪದೇ ನೀರು ಕುಡಿಯುವುನ್ನು ಮರೆಯುತ್ತಾರೆ. ಹೀಗಾಗಿ ಮಕ್ಕಳಿಗೆ ನೆನಪಿಸಲು ತರಗತಿಗಳ ಮಧ್ಯೆ ಪ್ರತಿ 45 ರಿಂದ 60 ನಿಮಿಷಗಳಿಗೊಮ್ಮೆ ವಾಟರ್ ಬೆಲ್ ಬಾರಿಸುವುದಂತೆ ಸೂಚಿಸಲಾಗಿದೆ.

ಶಾಖ ಸಂಬಂಧಿತ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸುವುದು ಮತ್ತು ನಿರ್ಜಲೀಕರಣದ ಅಪಾಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಕ್ಕಳು ಹೆಚ್ಚಿನ ಸಮಯ ಹೊರಾಂಗಣದಲ್ಲಿ ಸಮಯ ಕಳೆಯದಂತೆ ನೋಡಿಕೊಳ್ಳಬೇಕು. ಜೊತೆಗೆ ವಿದ್ಯಾರ್ಥಿಗಳಿಗೆ ಹೀಟ್ ವೇವ್ ಹಾಗೂ ಅದರಿಂದ ರಕ್ಷಿಸಿಕೊಳ್ಳಲು ಜಾಗೃತಿ ಮೂಡಿಸಬೇಕು.

- Advertisement -

Related news

error: Content is protected !!