Saturday, May 15, 2021
spot_imgspot_img
spot_imgspot_img

ದೇವರಗುಡಿಹಾಳದಲ್ಲಿ ವಿಚಿತ್ರ ರೀತಿಯಲ್ಲಿ ಕೊಲೆ; ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸರು!

- Advertisement -
- Advertisement -

ಹುಬ್ಬಳ್ಳಿ: ಏ‌.10ರಂದು ಸಂಜೆ ಹುಬ್ಬಳ್ಳಿಯ ದೇವರಗುಡಿಹಾಳ ಹದ್ದಿನಲ್ಲಿ ಕೊಲೆ ಮಾಡಿ, ರುಂಡವನ್ನು ಮಾತ್ರ ತಂದು ಅರ್ಧಂಬರ್ಧ ಸುಟ್ಟಿದ್ದ ಪ್ರಕರಣ ಭೇದಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ.

ತಲೆ ಕೆಳಗಿನ ಶರೀರವನ್ನು ಎಲ್ಲಿಯೋ ಸಾಕ್ಷಿ ಪುರಾವೆ ನಾಶಪಡಿಸಿದ್ದರು. ಸದರಿ ಆಪಾಧಿತರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸುವಂತೆ ಪಿರ್ಯಾದಿ ಯಲ್ಲಪ್ಪ ಹನುಮಂತಪ್ಪ ದಾಸರ ದೇವರಗುಡಿಹಾಳ ಹುಬ್ಬಳ್ಳಿ ಏ.12ರಂದು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಪ್ರಕರಣದ ಆರೋಪಿತರಾದ ನಿಯಾಜ ಅಹ್ಮದ ಸೈಪುದ್ದೀನ ಕಟಿಗಾರ (21), ತೌಸೀಪ ಅಬ್ದುಲರೆಹಮಾನ ಚನ್ನಾಪೂರ (21), ಅಲ್ತಾಫ ತಾಜುದ್ದೀನ ಮುಲ್ಲಾ (24), ಅಮನ ಉರ್ಫ ಮಹ್ಮದಉಮರ ತಂದೆ ನೂರಅಹ್ಮದ ಗಿರಣಿವಾಲೆ (19 ) ಇವರನ್ನು ಬಂಧಿಸಿದ್ದಾರೆ.

ಸದರಿ ಆರೋಪಿ ನಿಯಾಜ ಅಹ್ಮದ ಮೃತ ರಾಕೇಶನ ಸಹೋದರಿಯನ್ನು ಪ್ರೀತಿಸುತ್ತಿದ್ದ. ಅದಕ್ಕೆ ಮೃತನು ಸಿಟ್ಟಾಗಿದ್ದರಿಂದ ಅವನನ್ನು ಎಲ್ಲ ಆರೋಪಿತರು ಸೇರಿ ಕೊಲೆ ಮಾಡಿ ಶವವನ್ನು ಕತ್ತರಿಸಿ ಅರ್ಧಂಬರ್ಧ ಸುಟ್ಟು ರುಂಡವನ್ನು ದೇವರಗುಡಿಹಾಳ ಹದ್ದಿಯ ಅರಣ್ಯ ಪ್ರದೇಶದಲ್ಲಿ ಹಾಗೂ ಮುಂಡ, ಕೈ ಕಾಲುಗಳನ್ನು ಕೇಶ್ವಾಪೂರ ಠಾಣಾ ವ್ಯಾಪ್ತಿಯಲ್ಲಿ ಸಾಕ್ಷಿ ಪುರಾವೆ ನಾಶಪಡಿಸಿದ್ದರು‌.

ವಿಚಾರಣೆ ವೇಳೆ ಈ ಅಪರಾಧ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಆರೋಪಿಗಳ ವಿಚಾರಣೆ ಮುಂದುವರಿಸಲಾಗಿದೆ. ಪ್ರಕರಣವನ್ನು ಬೆಳಕಿಗೆ ತಂದ ವಿಶೇಷ ತನಿಖಾ ತಂಡದ ಸದಸ್ಯರಿಗೆ
ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಬಹುಮಾನ ಘೋಷಿಸಿದ್ದಾರೆ.

ಡಿ.ವೈ.ಎಸ್.ಪಿ ಎಂ.ಬಿ.ಸಂಕದ ಸೇರಿದಂತೆ ಪ್ರಕರಣದ ತನಿಖಾಧಿಕಾರಿ, ವಿವಿಧ ತಂಡಗಳ ನೇತೃತ್ವ ವಹಿಸಿದ ಪೊಲೀಸ್ ಅಧಿಕಾರಿಗಳ ಕಾರ್ಯಕ್ಕೆ ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದರು.

- Advertisement -
- Advertisement -

MOST POPULAR

HOT NEWS

Related news

error: Content is protected !!