Wednesday, April 24, 2024
spot_imgspot_img
spot_imgspot_img

ಆನ್‍ಲೈನ್ ನಲ್ಲಿ ಹಣ ಸಂಪಾದಿಸುವ ಜಾಹೀರಾತಿಗೆ ಮಾರುಹೋಗಿ ಬರೋಬ್ಬರಿ 14 ಲಕ್ಷ ರೂ. ಕಳೆದುಕೊಂಡ ಮಹಿಳೆ!

- Advertisement -G L Acharya panikkar
- Advertisement -

ಹುಬ್ಬಳ್ಳಿ: ಸೋಷಿಯಲ್ ಮಿಡಿಯಾದಲ್ಲಿ ಉದ್ಯೋಗಾವಕಾಶದ ಜಾಹಿರಾತಿಗೆ ಮಾರುಹೋಗಿ ಮಹಿಳೆಯೊಬ್ಬರು ಬರೋಬ್ಬರಿ 14 ಲಕ್ಷ ರೂ. ಕಳೆದುಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ವಂಚನೆಗೊಳಗಾದ ಮಹಿಳೆಯನ್ನು ವಿನುತಾ ಕಾಲೋನಿ ನಿವಾಸಿ ನಿಖಿತಾ ಗುಂಟಿ ಎನ್ನಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವರ್ಕ್ ಫ್ರಂ ಹೋಮ್ ಮೂಲಕ ಹೆಚ್ಚಿನ ಆದಾಯ ಗಳಿಸಬಹುದು ಎಂದು ದಿವ್ಯಾ ಎಂಬ ಹೆಸರಿನ ಯುವತಿ ಜಾಹೀರಾತು ಹಾಕಿದ್ದರು. ಅಲ್ಲದೇ, ಆನ್‍ಲೈನ್ ಲಿಂಕ್ ಸಹಿತ ಕಳುಹಿಸಿದ್ದಳು. ಬಳಿಕ ಅರ್ಜುನ ಹೆಸರಿನ ವ್ಯಕ್ತಿ ಮಹಿಳೆಯ ಜತೆಗೆ ವಾಟ್ಸ್ಯಾಪ್ ಮತ್ತು ಟೆಲಿಗ್ರಾಂ ಆಪ್‍ನಿಂದ ಚಾಟ್ ಮಾಡಿದ್ದಾನೆ. ಅಲ್ಲದೆ ದಿವ್ಯಾ ನೀಡಿದ ಲಿಂಕ್ ಒತ್ತಲು ಹೇಳಿದ್ದಾನೆ.

ಬಳಿಕ ಮಹಿಳೆಯಿಂದ 100 ರೂ. ರಿಚಾರ್ಜ್ ಮಾಡಿಸಿಕೊಂಡು ಅದೇ ಆಪ್ ಮೂಲಕ ಮಹಿಳೆಗೆ 200 ರೂ. ಮರಳಿಸಿದ್ದಾರೆ. ಹೀಗೆಯೇ 3 ಸಾವಿರ ರೂ.ಗೆ 3400 ರೂ., 20 ಸಾವಿರಕ್ಕೆ 24 ಸಾವಿರ ರೂ.ವನ್ನು ಮಹಿಳೆಗೆ ಮರಳಿಸಿ ನಂಬಿಸಿದ್ದಾನೆ. ಇದೇ ರೀತಿ ಆಪ್‍ನಲ್ಲಿ ಹೆಚ್ಚು ಹಣ ಹೂಡಿಕೆ ಮಾಡಿದರೆ, ಹೆಚ್ಚು ಹಣ ಗಳಿಸಬಹುದು ಎಂದು ನಿಖಿತಾಳ ವಿಶ್ವಾಸ ಗಳಿಸಿದ್ದನು.

ಇದನ್ನು ನಂಬಿದ ನಿಖಿತಾ ಆನ್‍ಲೈನ್ ಮೂಲಕ ಆರೋಪಿ ಬ್ಯಾಂಕ್ ಖಾತೆಗೆ 1.91 ಲಕ್ಷ ರೂ. ಹಾಗೂ 12.65 ಲಕ್ಷ ರೂ. ವರ್ಗಾವಣೆ ಮಾಡಿದ್ದರು. ಇವರಿಗೆ ಹಣ ಮಾತ್ರ ಮರಳಿ ಬರಲಿಲ್ಲ. ಈ ಬಗ್ಗೆ ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!