Monday, June 30, 2025
spot_imgspot_img
spot_imgspot_img

ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಕೊಲೆ ಕೇಸ್‌ – ಪೊಲೀಸರ ಗುಂಡೇಟಿಗೆ ಆರೋಪಿ ಬಲಿ

- Advertisement -
- Advertisement -

ಹುಬ್ಬಳ್ಳಿ: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ ಪ್ರಕರಣದ ಆರೋಪಿಯು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ.ಬಿಹಾರ ಮೂಲದ ಆರೋಪಿ ರಿತೇಶ್‌ ಕುಮಾರ್‌ ಗುಂಡೇಟಿಗೆ ಸಾವನ್ನಪ್ಪಿದ ಆರೋಪಿ. ಮಹಿಳಾ ಪಿಎಸ್‌ಐ ಗುಂಡೇಟು ನೀಡಿದ್ದರು. ಎದೆಗೆ ಗುಂಡು ತಾಗಿ ತೀವ್ರವಾಗಿ ಗಾಯಗೊಂಡಿದ್ದ ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌, ಬೆಳಗ್ಗೆ ಹುಬ್ಬಳ್ಳಿ ಅಶೋಕ ನಗರ ವಿಜಯನಗರ ಬಳಿ ಮಗು ಮಿಸ್ ಆಗಿದೆ ಎಂದು ಮಾಹಿತಿ ಇತ್ತು. ಪ್ರಕರಣದ ಆರೋಪಿ ಬಿಹಾರ ಮೂಲದ ಪಾಟ್ನಾದವನು. ಹುಬ್ಬಳ್ಳಿ ತಾರಿಹಾಳರ ಬಳಿ ಮನೆ ಮಾಡಿಕೊಂಡಿದ್ದ. ಆರೋಪಿ ನಮ್ಮ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದ. ಮಹಿಳಾ ಪೊಲೀಸ್ ಅಧಿಕಾರಿ ಏರ್ ಫೈಯರ್‌ ಮಾಡಿದ್ದರು. ಆತ ಓಡಿ ಹೋಗುವಾಗ ಎರಡು ಗುಂಡು ಆತನ ಮೇಲೆ ಹಾರಿಸಲಾಗಿತ್ತು. ಆಗ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ರವಾನೆ ಮಾಡಿದ್ದರು. ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಪಿಎಸ್‌ಐ ಅನ್ನಪೂರ್ಣ ಹಾಗೂ ಇಬ್ಬರು ಸಿಬ್ಬಂದಿಗೆ ಗಾಯವಾಗಿದೆ. ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದೆವು ಎಂದು ಮಾಹಿತಿ ನೀಡಿದ್ದಾರೆ.ವಿಚಾರಣೆ ವೇಳೆ ಆರೋಪಿಯು ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ ಆತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಕಮಿಷನರ್‌ ಶಶಿಕುಮಾರ್‌ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡಿದ್ದ ಪಿಎಸ್‌ಐ ಅನ್ನಪೂರ್ಣ ಹಾಗೂ ಪೇದೆ ಆರೋಗ್ಯ ವಿಚಾರಿಸಿದ್ದಾರೆ.

- Advertisement -

Related news

error: Content is protected !!