Thursday, May 16, 2024
spot_imgspot_img
spot_imgspot_img

ಅಮೃತಹಳ್ಳಿ ಠಾಣೆ ಮೇಲೆ ಮಾನವ ಹಕ್ಕು ಆಯೋಗ ದಾಳಿ‌ : ಪೊಲೀಸ್ ಇನ್ಸ್​ಪೆಕ್ಟರ್ ಅಂಬರೀಶ್​ಗೆ ನೋಟಿಸ್ ಜಾರಿ..!

- Advertisement -G L Acharya panikkar
- Advertisement -

ಆರೋಪಿಯನ್ನು 10 ದಿನಗಳ ಕಾಲ ಅಕ್ರಮವಾಗಿ ‌ಬಂಧನದಲ್ಲಿಟ್ಟುಕೊಂಡಿದ್ದ ಆರೋಪದಡಿ ಅಮೃತಹಳ್ಳಿ ಠಾಣೆ ಮೇಲೆ ಮಾನವ ಹಕ್ಕು ಆಯೋಗ ದಾಳಿ‌ ಮಾಡಿತ್ತು. ಇದೀಗ ಮಾನವ ಹಕ್ಕುಗಳ ಆಯೋಗ ಇನ್ಸ್​ಪೆಕ್ಟರ್ ಅಂಬರೀಶ್​ಗೆ ನೋಟಿಸ್ ಜಾರಿ ಮಾಡಿದೆ.

ಅಕ್ರಮ ಬಂಧನ ಪ್ರಕರಣದ ಸಂಬಂಧ ಡಿಟೇಲ್ಸ್ ನೀಡುವಂತೆ ನೋಟಿಸ್ ನೀಡಿದೆ. ಮಾನವಹಕ್ಕುಗಳ ಆಯೋಗದ ಕಚೇರಿಗೆ ಹಾಜರಾಗುವಂತೆ ಸೂಚನೆ ನೀಡಿದೆ. ಈ ಬಗ್ಗೆ DySP ಸುಧೀರ್ ಹೆಗಡೆ ತಂಡದಿಂದ ವಿಚಾರಣೆ ನಡೆದಿದ್ದು, ವಾರಂಟ್ ಜಾರಿಯಾಗಿದ್ದ ಆರೋಪಿ ಯಾಸಿನ್ ಮೆಹಬೂಬ್​ ಖಾನ್​​​ ಎಂಬಾತನನ್ನು ಅಕ್ರಮವಾಗಿ ಬಂಧಿಸಿದ್ದರು.

ಯಾಸಿನ್ ಮೆಹಬೂಬ್​ ಖಾನ್​​ನ್ನು ಇನ್ಸ್​ಪೆಕ್ಟರ್​​ ಅಂಬರೀಶ್​ ಸೂಚನೆ ಮೇರೆಗೆ ಕರೆತಂದಿದ್ದ ಆರೋಪ ಕೇಳಿಬಂದಿದೆ. 10 ದಿನಗಳ ಕಾಲ ಇನ್ಸ್​ಪೆಕ್ಟರ್ ಅಂಬರೀಶ್ ಅಕ್ರಮವಾಗಿ ‌ಬಂಧನದಲ್ಲಿರಿಸಿದ್ದರು. ಆರೋಪಿಯನ್ನು ಬಂಧಿಸಲು ಕ್ರೈಂ ಕಾನ್​​ಸ್ಟೇಬಲ್​ಗಳು ಹಿರಿಯ ಅಧಿಕಾರಿಗಳ ಗಮನಕ್ಕೆ ತರದೇ ಮುಂಬೈಗೆ ಹೋಗಿದ್ರು.
ಕಾನ್​​ಸ್ಟೇಬಲ್​​ಗಳು ರೂಲ್ಸ್ ವೈಲೇಶನ್ ಮಾಡಿ ಅಕ್ರಮ ಬಂಧನದಲ್ಲಿ ಇಟ್ಟಿದ್ದು ಸಾಬೀತಾಗಿದ್ದು, ದ್ದರು. ಇದೇ ಇನ್ಸ್​ಪೆಕ್ಟರ್ ಅಂಬರೀಶ್ ಮೇಲೆ 3 ವರ್ಷಗಳ ಹಿಂದೆ ಗಂಭೀರ ಆರೋಪವಿದೆ.

- Advertisement -

Related news

error: Content is protected !!