Monday, June 17, 2024
spot_imgspot_img
spot_imgspot_img

ಉಪ್ಪಿನಂಗಡಿ: ಕಾಡು ಪ್ರಾಣಿಗಳ ಬೇಟೆ : ಮೂವರು ಆರೋಪಿಗಳು ಪೊಲೀಸ್‌ ವಶ

- Advertisement -G L Acharya panikkar
- Advertisement -

ಉಪ್ಪಿನಂಗಡಿ: ಅರಣ್ಯ ಇಲಾಖೆಗೆ ಸೇರಿದ ಕಾಡಿನಲ್ಲಿ ಕಾಡು ಪ್ರಾಣಿಗಳ ಬೇಟೆಗೆ ಯತ್ನಿಸುತ್ತಿದ್ದ ಮೂವರನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಬಂಧಿಸಿದೆ.

ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ನಡೆಸಿದ್ದ ಕಾರ್ಯಾಚರಣೆಯಲ್ಲಿ ಶಿಬಾಜೆ ಗ್ರಾಮದ ಕುರುಂಬು ಎಂಬಲ್ಲಿನ ಹರೀಶ್, ಸಕಲೇಶಪುರದ ಕೌಡಳ್ಳಿಯ ಶಿವಕುಮಾರ್, ಶಿಬಾಜೆಯ ಪದ್ಮನಾಭ ಬಂಧಿತರು.

ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಗೆ ಸೇರಿದ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಪೆರ್ಲ- ಕಲ್ಲಾಜೆ ರಸ್ತೆಯ ಪತ್ತಿಮಾರ್ ಎಂಬಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳಿಂದ ಒಂದು ಸಿಂಗಲ್ ಬ್ಯಾರೆಲ್ ಬಂದೂಕು, ಕಾರು ವಶಕ್ಕೆ ಪಡೆಯಲಾಗಿದೆ.

ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ. ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ರಾಜೇಶ್, ಅವಿನಾಶ್, ಶಿವಕುಮಾರ್ ಹೊಸ್ಮನಿ, ರವೀಂದ್ರ, ಬೀಟ್ ಫಾರೆಸ್ಟರ್ ನಿಂಗಪ್ಪ ಅವರಿ ಮತ್ತು ಚಾಲಕ ಕಿಶೋರ್ ಪಾಲ್ಗೊಂಡಿದ್ದರು.

- Advertisement -

Related news

error: Content is protected !!