Monday, June 8, 2026
spot_imgspot_img
spot_imgspot_img

ಮೂಡುಬಿದಿರೆ: ಮರದಿಂದ ಬಿದ್ದು ಕಾರ್ಮಿಕ ಮೃತ್ಯು

- Advertisement -
- Advertisement -

ಮೂಡುಬಿದಿರೆ: ಸಿಡಿಲು ಬಡಿದು ಹಾನಿಗೀಡಾಗಿದ್ದ ತೆಂಗಿನಮರವನ್ನು ಕಡಿಯಲು ಕಾರ್ಮಿಕರೊಬ್ಬರು ಮರವೇರಿದ್ದಾಗ ಮರವು ಅರ್ಧದಲ್ಲೇ ತುಂಡಾಗಿ ಕಾರ್ಮಿಕ ನೆಲಕ್ಕೆ ಬಿದ್ದು ಮೃತಪಟ್ಟ ಘಟನೆ ಪಡುಮಾರ್ನಾಡು ಗ್ರಾಮದ ಬಸವನ ಕಜೆಯಲ್ಲಿ ಸಂಭವಿಸಿದೆ.

ಮೃತ ವ್ಯಕ್ತಿ ಅಲಂಗಾರು ಚಂದ್ರಾಪುರ ನಿವಾಸಿ ನವೀನ್ ಪ್ರಕಾಶ್ ರೋಡ್ರಿಗಸ್ (40) ಎಂದು ತಿಳಿದು ಬಂದಿದೆ.

ಅವರು ನಿವೃತ್ತ ಅಬಕಾರಿ ನಿರೀಕ್ಷಕ ದೇವೋಜಿ ರಾವ್ ಅವರ ಮನೆಯ ತೆಂಗಿನ ಮರ ಕಡಿಯಲು ಮರವೇರಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಘಟನೆ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!