Monday, July 20, 2026
spot_imgspot_img
spot_imgspot_img

ಮಾಜಿ ಸಂಸದರೊಂದಿಗೆ ಅಕ್ರಮ ಸಂಬಂಧ ಎಂದು ಪತ್ನಿ ವಿರುದ್ಧ ಆರೋಪ: ಪತಿಗೆ ಜೈಲು ಶಿಕ್ಷೆ, ದಂಡ

- Advertisement -
- Advertisement -

ಮಂಗಳೂರು: ಮಾಜಿ ಸಂಸದರೊಂದಿಗೆ ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಮಾಧ್ಯಮಗಳಲ್ಲಿ ಪ್ರಸಾರ ಮಾಡಿಸಿದ ಆರೋಪಿ ಪತಿಗೆ ಮಂಗಳೂರಿನ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯ 3ನೇ ನ್ಯಾಯಾಲಯದ ನ್ಯಾಯಾಧೀಶ ಸುರೇಶ ಇ.ಎಸ್. ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಮುಂಬೈ ಥಾಣೆಯ ಮೀರಾ ರೋಡ್ ಈಸ್ಟ್ ನಿವಾಸಿ ಸತೀಶ್ ಶೆಟ್ಟಿ ಶಿಕ್ಷೆಗೊಳಗಾದ ಆರೋಪಿ. ಆರೋಪಿಯು ಮಕ್ಕಳಾದ ಬಳಿಕ ತನಗೆ ಮಾನಸಿಕ ಹಿಂಸೆ ನೀಡುತ್ತಿದ್ದ. ಹಾಗಾಗಿ ತಾನು ತಾಯಿಯ ಮನೆಯಲ್ಲಿ ವಾಸವಾಗಿದ್ದೆ. 2014ರ ಮೇ 13ರಂದು ಆರೋಪಿಯು ಖಾಸಗಿ ಟಿವಿ ಚಾನೆಲ್ ಹಾಗೂ ಎರಡು ಪತ್ರಿಕೆಗಳಲ್ಲಿ ಮಾಜಿ ಸಂಸದರ ಜೊತೆಗೆ ತನಗೆ ಅನೈತಿಕ ಸಂಬಂಧ ಇದೆ ಎಂದು ಸುದ್ದಿ ಪ್ರಕಟಿಸಿದ್ದ ಎಂದು ಸಂತ್ರಸ್ತೆ ದೂರು ನೀಡಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿ ಸತೀಶ್ ಶೆಟ್ಟಿಗೆ ಐಪಿಸಿ 509 ಪ್ರಕಾರ ಒಂದು ವರ್ಷ ಸಾದಾ ಸಜೆ ಮತ್ತು 5,000 ರೂ.ದಂಡ, ದಂಡ ಪಾವತಿಸಲು ತಪ್ಪಿದರೆ ಒಂದು ತಿಂಗಳು ಹೆಚ್ಚುವರಿ ಸಾದಾ ಸಜೆ ಅನುಭವಿಸಲು ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿಗಳಾದ ನೇತ್ರಾವತಿ ಮತ್ತು ಗೀತಾ ರೈ ವಾದಿಸಿದ್ದರು

- Advertisement -

Related news

error: Content is protected !!