Friday, April 26, 2024
spot_imgspot_img
spot_imgspot_img

ಹ್ಯಾಮಿಟಲ್ ಸರ್ಕಲ್ – ಪಂಪ್ವೆಲ್ ಸರ್ಕಲ್ ವರೆಗೆ ರಸ್ತೆ ಅಗಲೀಕರಣ ಕಾಮಗಾರಿಗೆ ಶಾಸಕ ಕಾಮತ್ ಗುದ್ದಲಿಪೂಜೆ

- Advertisement -G L Acharya panikkar
- Advertisement -

ಮಂಗಳೂರು:- ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹ್ಯಾಮಿಟಲ್ ಸರ್ಕಲ್ ನಿಂದ ಪಂಪ್ವೆಲ್ ಸರ್ಕಲ್ ವರೆಗೆ ರಸ್ತೆ ಅಗಲೀಕರಣ, ಮಳೆನೀರು ಚರಂಡಿ ಹಾಗೂ ಪಾದಾಚಾರಿ ದಾರಿ ನಿರ್ಮಾಣಕ್ಕಾಗಿ 4.5 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ‌ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ಈ ಕಾಮಗಾರಿಯ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಕಾಮತ್, ಮಂಗಳೂರು ನಗರವು ದೇಶದ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಎಲ್ಲ ವಿಧಗಳಲ್ಲೂ ಮಂಗಳೂರು ಅತ್ಯಂತ ಜನಪ್ರಿಯವಾಗಿದೆ. ಹಾಗಾಗಿ ನಗರವು ಮುಂಬರುವ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆ ಅಥವ ಇನ್ನುಳಿದ ಮೂಲಭೂತ‌ ಸೌಕರ್ಯಗಳ ಕೊರತೆಯಾಗಬಾರದು. ನಗರದ ಪ್ರಮುಖ ರಸ್ತೆಗಳ ಅಗಲೀಕರಣ, ಒಳಚರಂಡಿ ವ್ಯವಸ್ಥೆ ಸೇರಿದಂತೆ ವಿವಿಧ ಕಾಮಗಾರಿಗಳು ಈ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ದಿವಾಕರ್ ಪಾಂಡೇಶ್ವರ, ಪಾಲಿಕೆ‌ ಸ್ಥಾಯಿ ಸಮಿತಿ ಅದ್ಯಕ್ಷರಾದ ಪೂರ್ಣಿಮಾ, ಜಗದೀಶ್ ಶೆಟ್ಟಿ ಬೇಳೂರು, ಕಿರಣ್ ಕುಮಾರ್, ಶರತ್, ಪಾಲಿಕೆ ಸದಸ್ಯರಾದ ನವೀನ್ ಡಿ.ಸೋಜ, ಕಾವ್ಯಾ ನಟರಾಜ್ ಆಳ್ವ, ಬಿಜೆಪಿ ಮುಖಂಡರಾದ ರಂಗನಾಥ್ ಕಿಣಿ, ಯೋಗಿಶ್ ಶೆಣೈ,ದಯಾನಂದ ಸನ್ಯಾಸಿಗುಡ್ಡೆ, ಜೆಸ್ಸಿಲ್, ನವೀನ್ ಶೆಣೈ,ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್, ರಾಮ್ ರಾಯ್ ಕಾಮತ್, ಲಕ್ಷ್ಮಣ್ ಭಟ್, ರಾಧಾಕೃಷ್ಣ ಕುದ್ಕೇರಿಗುಡ್ಡೆ, ಸಚಿನ್‌ ಸಾಲ್ಯಾನ್,ಅರ್ಚನಾ ಆಳ್ವ, ಪ್ರವೀಣ್ ಶೇಟ್, ರಾಯನ್ ಮುಂತಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!