Friday, June 19, 2026
spot_imgspot_img
spot_imgspot_img

ಭೀಕರ ಅಪಘಾತ: ನವ ವಿವಾಹಿತ ಸ್ಥಳದಲ್ಲೇ ಮೃತ್ಯು

- Advertisement -
- Advertisement -

ಹೈದರಾಬಾದ್: ಒಂಬತ್ತು ತಿಂಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಯುವಕ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಆಂಧ್ರಪ್ರದೇಶದ ಕೊಮರುಡಾ ಮುಂಡಲದ ಕುಮ್ಮರಿಗುಂಟ ಗ್ರಾಮದಲ್ಲಿ ಈ ಘಟನೆ ನಡೆದಿದೆ.27 ವರ್ಷದ ಪ್ರವೀಣ್ ಅಪಘಾತದಲ್ಲಿ ಮೃತ ಯುವಕ.

ಪ್ರವೀಣ್ ತರಕಾರಿ ಮಾರಿ ಜೀವನ ನಡೆಸುತ್ತಿದ್ದರು. ಮೃತ ಪ್ರವೀಣ್ ಫೆಬ್ರವರಿ 2020ರಲ್ಲಿ ರೋಜಾಳನ್ನು ವಿವಾಹವಾಗಿದ್ದರು. ಮದುವೆಯಾಗಿ ಕೇವಲ ಒಂಬತ್ತು ತಿಂಗಳಿಗೆ ಪ್ರವೀಣ್ ಸಾವನ್ನಪ್ಪಿದ್ದಾರೆ.ಪ್ರವೀಣ್ ಬೆಳಗ್ಗೆ ಬೊಲೆರೊ ವಾಹನದಲ್ಲಿ ತರಕಾರಿ ತರಲು ಬೊಬ್ಬಿಲಿ ಮಾರುಕಟ್ಟೆಗೆ ಹೊರಟಿದ್ದರು.

ಈ ವೇಳೆ ಬೊಲೆರೊ ರಸ್ತೆಯಲ್ಲಿ ನಿಲ್ಲಿಸಿದ ಲಾರಿಗೆ ಡಿಕ್ಕಿ ಹೊಡೆದಿದೆ. ವಾಹನದಲ್ಲಿದ್ದ ಪ್ರವೀಣ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮೃತ ಪ್ರವೀಣ್ ಪತ್ನಿ 6 ತಿಂಗಳ ಗರ್ಭಿಣಿಯಾಗಿದ್ದಳು. ಮಗನನ್ನು ಕಳೆದುಕೊಂಡ ಪೋಷಕರು, ಪತಿಯನ್ನು ಕಳೆದುಕೊಂಡ ಪತ್ನಿ, ಪ್ರವೀಣ್‍ನ ಇಡೀ ಕುಟುಂಬವೇ ದುಖಃದಲ್ಲಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮತ್ತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!