- Advertisement -
- Advertisement -
ಹೈದರಾಬಾದ್: ಸಹೋದ್ಯೋಗಿಯೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿ ಸಿಕ್ಕಿಬಿದ್ದಿದ್ದ ಹೈದರಾಬಾದ್‌ನ ಜವಹರ್ ನಗರ ಠಾಣೆಯ ಸಬ್ ಇನ್ಸ್ಪೆಕ್ಟರ್‌ನನ್ನು ರಾಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಭಾಗವತ್ ಅಮಾನತು ಮಾಡಿದ್ದಾರೆ.

ಎಸ್‌ಐ ಅನಿಲ್ ತಮ್ಮದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಂದಿಗೆ ತುಂಬಾ ದಿನಗಳಿಂದ ಅನೈತಿಕ ಸಂಬoಧ ಇಟ್ಟುಕೊಂಡಿದ್ದರು. ಈ ಸಂಬAಧ ದೂರು ಸಹ ದಾಖಲಾಗಿತ್ತು.

ಇದರ ನಡುವೆ ತಿಮ್ಮೈಪಲ್ಲಿಯಲ್ಲಿರುವ ಸೈಲೆಂಟ್ ವಾಲ್ಟ್ ರೆಸಾರ್ಟ್ನಲ್ಲಿ ಅನಿಲ್ ಮತ್ತು ಮಹಿಳೆ ಇಬ್ಬರು ಸೇರಿರುವುದಾಗಿ ಕೀಸರ ಠಾಣೆಗೆ ಪೊಲೀಸರಿಗೆ ಮಾಹಿತಿ ಬಂದಿತ್ತು.

ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದಾಗ ಎಸ್‌ಐ ಅನಿಲ್ ಮತ್ತು ಮಹಿಳೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಇಬ್ಬರನ್ನು ವಶಕ್ಕೆ ಪಡೆದಿದ್ದು, ಪೊಲೀಸರು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರಿಂದ ಅನಿಲ್‌ರನ್ನು ಪೊಲೀಸ್ ಆಯುಕ್ತರು ಅಮಾನತು ಮಾಡಿದ್ದಾರೆ.


- Advertisement -