Monday, June 15, 2026
spot_imgspot_img
spot_imgspot_img

ಹೈದರಾಬಾದ್ ದಂತ ವೈದ್ಯರ ಅಪಹರಣ ಪ್ರಕರಣ-ಉಡುಪಿ ಮೂಲದ ಆರೋಪಿಯ ಬಂಧನ!!

- Advertisement -
- Advertisement -

ಹೈದರಾಬಾದ್(ಅ.29): ಹೈದರಾಬಾದ್ ನಗರದ ಸುಖಾಂತ್ಯ ಕಂಡಿದೆ. ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಪೊಲೀಸ್ ಆಯುಕ್ತ ವಿ ಸಿ. ಸಜ್ಜನರ್ ನೇತೃತ್ವದ ತಂಡ ಏಳು ಮಂದಿಯನ್ನು ಬಂಧಿಸಿದೆ. ಬಂಧಿತರಲ್ಲಿ ಉಡುಪಿ ಮೂಲದ ಆರೋಪಿ ಕೂಡ ಸೇರಿದ್ದಾನೆ.

ಬುರ್ಖಾ ಧರಿಸಿ ಕ್ಲಿನಿಕ್ ಗೆ ಬಂದಿದ್ದ ಆರೋಪಿಗಳು ವೈದ್ಯ ಬೆಹಜತ್ ಹುಸೇನ್ ಎಂಬವರನ್ನು ಅಪಹರಿಸಿದ್ದರು. 10 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಇದನ್ನು ಸವಲಾಗಿ ಸ್ವೀಕರಿಸಿದ ಕನ್ನಡಿಗ ಪೊಲೀಸ್ ಅಧಿಕಾರಿ ವಿ ಸಿ ಸಜ್ಜನರ್ ವಿಶೇಷ ತನಿಖಾ ತಂಡ ರಚಿಸಿದರು. 100ಕ್ಕೂ ಹೆಚ್ಚು ಸಿಬ್ಬಂದಿ ಈ ಶೋಧ ಕಾರ್ಯದಲ್ಲಿ ಭಾಗವಹಿಸಿದ್ದರು. ಅಂತಿಮವಾಗಿ ಆಂಧ್ರಪ್ರದೇಶದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಉಡುಪಿ ಮೂಲದ ಆರೋಪಿಯನ್ನು ಸಂಜಯ್ ಎಂದು ಗುರುತಿಸಲಾಗಿದೆ. ಅಪಹರಣದ ಸೂತ್ರಧಾರ ಸೇರಿದಂತೆ ಆರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಯತ್ನ ಮುಂದುವರಿದಿದೆ.

- Advertisement -

Related news

error: Content is protected !!