Wednesday, July 2, 2025
spot_imgspot_img
spot_imgspot_img

ಡ್ರೋನ್ ಮೂಲಕ ದೇಶದ ಮೂಲೆ ಮೂಲೆಗೆ ಕೊರೋನಾ ವ್ಯಾಕ್ಸೀನ್‌ ವಿತರಣೆ; ಐಸಿಎಂಆರ್‌

- Advertisement -
- Advertisement -

ನವದೆಹಲಿ: ದೇಶದ ಮೂಲೆ ಮೂಲೆಗೂ ವ್ಯಾಕ್ಸೀನ್‌ ತಲುಪಿಸುವ ಯೋಜನೆಯನ್ನು ಭಾರತ ಸರ್ಕಾರ ಹಾಕಿಕೊಂಡಿದೆ. ಈ ವರ್ಷಾಂತ್ಯದ ವೇಳೆಗೆ ವ್ಯಾಕ್ಸಿನೇಶನ್‌ ಮುಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಆದರೆ ಲಸಿಕೆಗಳ ಕೊರತೆಯಿಂದ ಕೇಂದ್ರ ಸರ್ಕಾರದ ಉದ್ಧೇಶಿತ ಲಸಿಕೆ ಅಭಿಯಾನ ಕುಂಟುತ್ತ ಸಾಗಿದೆ.

ಇತ್ತ ಲಸಿಕೆ ಸಮಸ್ಯೆ ಕಾಡುತ್ತಿದ್ದರೆ ಕೆಲವು ಪ್ರದೇಶಗಳಿಗೆ ಕೊರೋನಾ ಲಸಿಕೆಯನ್ನು ತಲುಪಿಸುವುದು ಹೇಗೆ ಎಂಬ ಪ್ರಶ್ನೆ ಭಾರತೀಯ ವೈದ್ಯಕೀಯ ಸಂಘಕ್ಕೆ ಆರಂಭವಾಗಿದೆ. ದೇಶದಲ್ಲಿ ಪ್ರವಾಹವಿರುವ ಕಡೆ, ಹಿಮಾಲಯದ ಉನ್ನತ ಪ್ರದೇಶಗಳಲ್ಲಿನ ಹಳ್ಳಿಗಳಿಗೆ, ಇನ್ನಾವುದೋ ಮಹಾ ಕಾಡಿನೊಳಗಿನ ಪ್ರದೇಶಗಳಿಗೆ ವ್ಯಾಕ್ಸೀನ್‌ ಸಮಯಕ್ಕೆ ಸರಿಯಾಗಿ ತಲುಪದೇ ಇರಬಾರದು ಎಂಬುದು ಐಸಿಎಂಆರ್‌ ಉದ್ಧೇಶವಾಗಿದೆ.

ಹಾಗಾಗಿ ಐಸಿಎಂಆರ್‌ ಸಂಸ್ಥೆ ಹೆಚ್‌ಎಎಲ್‌ ಜೊತೆ ಒಪ್ಪಂದ ಮಾಡಿಕೊಂಡಿದ್ದು ಡ್ರೋಣ್‌ ಮೂಲಕ ಅತ್ಯಂತ ರಿಮೋಟ್‌ ಪ್ರದೇಶಗಳಿಗೆ ವ್ಯಾಕ್ಸೀನ್‌ ತಲುಪಿಸುವ ವ್ಯವಸ್ಥೆ ಮಾಡಲಿದೆ.

ಹೆಚ್‌ಎಎಲ್‌ ಮತ್ತು ಐಸಿಎಂಆರ್‌ ಒಪ್ಪಂದಕ್ಕೆ ಬಂದಿದ್ದು UAV ( UN manned Areal Vehicle)‌ ವ್ಯವಸ್ಥೆ ನೀಡಲು ಹೆಚ್‌ಎಎಲ್‌ ಒಪ್ಪಿಕೊಂಡಿದೆ. 90 ದಿನಗಳ ಒಪ್ಪಂದ ಇದಾಗಿರಲಿದೆ ಎಂದು ಹೆಚ್‌ಎಎಲ್‌ ಹೇಳಿದೆ. ಈ ಹಿಂದೆ ಐಸಿಎಂಆರ್‌ ಗೆ ಡಿಜಿಸಿಎ ಮತ್ತು ಕೇಂದ್ರ ವಿಮಾನಯಾನ ಸಂಸ್ಥೆಯಿಂದ ಅನುಮತಿ ದೊರೆತಿರಲಿಲ್ಲ. ಈಗ ಕೇಂದ್ರ ವಿಮಾನ ಯಾನ ಇಲಾಖೆ ಮತ್ತು ಸಿವಿಲ್‌ ಏವಿಯೇಷನ್‌ ಅಥಾರಿಟಿ ಐಸಿಎಂಆರ್‌ ಮನವಿಗೆ ಸ್ಪಂದಿಸಿ ಅನುಮತಿ ನೀಡಿದ್ದಾರೆ.

ಐಸಿಎಂಆರ್‌ ವಿಜ್ಞಾನಿಗಳು ಲಸಿಕೆಗಳನ್ನು ಸಾಗಿಸುವ ವಿಧಾನ, ತಂತ್ರಜ್ಞಾನಗಳಿಗೆ ಸಂಬಂಧಿಸಿದಂತೆ ಐಐಟಿ ಕಾನ್ಪುರ ವಿಶ್ವವಿದ್ಯಾಲಯದ ಜೊತೆಗೂ ಕೈಜೋಡಿಸಿದ್ದಾರೆ.ದೇಶದಲ್ಲಿ ಕೊರೋನಾ ಲಸಿಕೆಯ ಕೊರತೆ ನಡುವೆಯೂ ಐಸಿಎಂಆರ್‌ ದೇಶದ ಮೂಲೆ ಮೂಲೆಗೂ ವ್ಯಾಕ್ಸೀನ್‌ ತಲುಪಿಸುವ ಪ್ರಯತ್ನಕ್ಕೆ ಮುಂದಾಗಿದೆ. ಐಸಿಎಂಆರ್‌ ಪ್ರಯತ್ನ ಯಶಸ್ವಿಯಾಗಲಿದೆಯೇ ಎಂಬುದನ್ನು ಮುಂದಿನ ದಿನಗಳಲ್ಲಿ ಕಾಣಬಹುದು.‌

- Advertisement -

Related news

error: Content is protected !!