Thursday, July 23, 2026
spot_imgspot_img
spot_imgspot_img

ಇಡ್ಕಿದು: (ನ.8-10) ರಜತಾದ್ರಿ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

- Advertisement -
- Advertisement -

ಇಡ್ಕಿದು: ರಜತಾದ್ರಿ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವವು ದಿನಾಂಕ: 08-11-2025ನೇ ಶನಿವಾರದಿಂದ 10-11-2025ನೇ ಸೋಮವಾರದವರೆಗೆ ನಡೆಯಲಿದೆ.

ದಿನಾಂಕ:08-11-2025ನೇ ಶನಿವಾರ ಸಂಜೆ 6.00ಕ್ಕೆ ದುರ್ಗಾನಮಸ್ಕಾರ ಪೂಜೆ ನಡೆದು 6.30ಕ್ಕೆ (ಸ್ಥಳೀಯರಿಂದ) ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7.30ಕ್ಕೆ ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ, ತೆಂಕಿಲ, ಇವರಿಂದ ಸಾಂಸ್ಕೃತಿಕ ಸಮನ್ವಯ ನಡೆಯಲಿದೆ.

ದಿನಾಂಕ: 09-11- 2025ನೇ ಆದಿತ್ಯವಾರ ಬೆಳಿಗ್ಗೆ 6.00ರಿಂದ ಗಣಹೋಮ, ನಾಗತಂಬಿಲ, ನವಕಲಶ ನಡೆದು 7.30ಕ್ಕೆ : ಚಂಡಿಕಾ ಹವನ ಪ್ರಾರಂಭವಾಗಲಿದೆ. 11.30ಕ್ಕೆ: ಚಂಡಿಕಾ ಹವನ ಪೂರ್ಣಾಹುತಿ ಬಳಿಕ 12.00ಕ್ಕೆ : ಮಹಾಪೂಜೆ, ಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.00ಕ್ಕೆ ದೈವದ ಭಂಡಾರ ತೆಗೆಯುವುದು. 7.00ರಿಂದ : ಕಲ್ಲುರ್ಟಿ, ಪಟ್ಟದ ಪಂಜುರ್ಲಿ, ಗುಳಿಗ ದೈವಗಳಿಗೆ ನೇಮೋತ್ಸವ ನಡೆದು 8.30ರಿಂದ : ಮಹಾಪೂಜೆ, ಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ.

ದಿನಾಂಕ: 10-11-2025ನೇ ಸೋಮವಾರ ಬೆಳಿಗ್ಗೆ 10.30ಕ್ಕೆ ಶ್ರೀ ದೇವಿಗೆ ವಿಶೇಷ ಮಹಾಪೂಜೆ, ದೈವಗಳಿಗೆ ವಾರ್ಷಿಕ ತಂಬಿಲ ನಡೆದು 11.30ಕ್ಕೆ ಗುಳಿಗನಿಗೆ ಕೋಳಿ ನೀಡುವುದು. ಬಳಿಕ ರಾತ್ರಿ 8.00ಗಂಟೆಗೆ ಕಲ್ಲುರ್ಟಿ ಅಗೇಲು ನಡೆಯಲಿದೆ.

- Advertisement -

Related news

error: Content is protected !!