Saturday, May 4, 2024
spot_imgspot_img
spot_imgspot_img

ಒಕ್ಕೆತ್ತೂರು ಶ್ರೀ ಮಲರಾಯಿ ದೈವಸ್ಥಾನದಲ್ಲಿ ಎ.14 ರಿಂದ 18 ರವರೆಗೆ 5 ದಿನಗಳ ನೇಮ ಮತ್ತು ಬಂಡಿ ಉತ್ಸವ

- Advertisement -G L Acharya panikkar
- Advertisement -

ವಿಟ್ಲ: ಒಕ್ಕೆತ್ತೂರು ಶ್ರೀ ಮಲರಾಯಿ ದೈವಸ್ಥಾನದಲ್ಲಿ ಎಪ್ರಿಲ್ 14 ರಿಂದ 18 ರವರೆಗೆ 5 ದಿನಗಳ ನೇಮ ಮತ್ತು ಬಂಡಿ ಉತ್ಸವ ನಡೆಯಲಿದೆ. ಕಾಲಾವಧಿ ಪ್ರಕಾರ ಎಪ್ರಿಲ್ 14 ನೇ ಗುರುವಾರದಂದು ರಾತ್ರಿ 10.30ಕ್ಕೆ ಕೋಚೋಡಿ ಭಂಡಾರದ ಮನೆಯಿಂದ ಒಕ್ಕೆತ್ತೂರು ಸ್ಥಾನಕ್ಕೆ ದೈವಗಳ ಭಂಡಾರ ಬರಲಿದೆ. ಇದೇ ದಿನ ಧ್ವಜಾರೋಹಣ ನಡೆಯಲಿದೆ.

ಎಪ್ರಿಲ್ 15 ನೇ ಶುಕ್ರವಾರದಂದು ಬೆಳಗ್ಗೆ ವಿಷು ಕಣಿ, ಹಾಗೂ ರಾತ್ರಿ ಕೊಟ್ಯದಾಯನ ನಡೆಯಲಿದೆ.
ಎಪ್ರಿಲ್ 16 ನೇ ಶನಿವಾರದಂದು ರಾತ್ರಿ ಉಳ್ಳಾಲ್ತಿ ಮೆಚ್ಚಿ ಜಾತ್ರೆ ನಡೆಯಲಿದೆ. 17 ರಂದು ಬೆಳಗ್ಗೆ ಶ್ರೀ ಮಲರಾಯಿ ದೈವಕ್ಕೆ ನೇಮ, ರಾತ್ರಿ 10 ಗಂಟೆಗೆ ಮಾಗಣೆ ಬಂಡಿ ಉತ್ಸವ ನಡೆಯಲಿದೆ.

ಎಪ್ರಿಲ್ 18 ನೇ ಸೋಮವಾರದಂದು ಬೆಳಗ್ಗೆ 10.30ಕ್ಕೆ ಶ್ರೀ ಮಲರಾಯಿ ದೈವದ ಹರಕೆ ನೇಮ , ಮಧ್ಯಾಹ್ನ ಅನ್ನಪ್ರಸಾದ, ರಾತ್ರಿ ದೈವಗಳ ಒಲಸರಿ ಉತ್ಸವ ಜಾತ್ರೆ ಕಡೇಬಂಡಿ ಉತ್ಸವ ನಡೆಯಲಿದೆ.
ತಾವೆಲ್ಲರೂ ಈ ಜಾತ್ರೋತ್ಸವದಲ್ಲಿ ಪಾಲ್ಗೊಂಡು ಗಂಧ ಪ್ರಸಾದ ಸ್ವೀಕರಿಸಿ, ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುವ ಗ್ರಾಮ ಗುರಿಕ್ಕಾರರು, ಊರ ಹತ್ತು ಸಮಸ್ತರು, ಬಂಗಾರು ಅರಸರು ವಿಟ್ಲ ಅರಮನೆ ಆಡಳಿತ ಮೊಕ್ತೇಸರರು.

vtv vitla
vtv vitla
- Advertisement -

Related news

error: Content is protected !!