Friday, May 17, 2024
spot_imgspot_img
spot_imgspot_img

ವಿಟ್ಲ: ಇಡ್ಕಿದು ಗ್ರಾಮ ಪಂಚಾಯತ್ – ಆರೋಗ್ಯ ಕ್ಷೇಮ ಕೇಂದ್ರ ಉದ್ಘಾಟನೆ

- Advertisement -G L Acharya panikkar
- Advertisement -

ಇಂದು, ಆಧುನಿಕ ಜೀವನ ಶೈಲಿಯಲ್ಲಿ ಆಹಾರ ಪದ್ಧತಿ, ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತಿದ್ದು, ನಿಯಮಿತವಾದ ಆರೋಗ್ಯ ತಪಾಸಣೆಯ ಅಗತ್ಯತೆ ಇರುತ್ತದೆ. ಹಳ್ಳಿ ಪ್ರದೇಶದಿಂದ ಪಟ್ಟಣಕ್ಕೆ ತೆರಳಲು ಆರ್ಥಿಕ ಹಾಗೂ ಸಮಯದ ಕೊರತೆಯನ್ನು ನೀಗಿಸುವಲ್ಲಿ ‘ಆಯುಷ್ಮಾನ್ ಭಾರತ್’ – ಆರೋಗ್ಯ ಕರ್ನಾಟಕದ ಯೋಜನೆಯಡಿ ಆರೋಗ್ಯ ಕ್ಷೇಮ ಕೇಂದ್ರವು ಸಹಕಾರಿಯಾಗಬಲ್ಲದು. ಗ್ರಾಮದ ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು ಆರೋಗ್ಯ ಕ್ಷೇಮ ಕೇಂದ್ರದ ಉದ್ಘಾಟನೆ ಮಾಡಿ ಶುಭಾಂಶನೆಗೈದರು.

11 ಗ್ರಾಮವನ್ನೊಳಗೊಂಡತ ಸೀಮಿತವಾದ ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ಒತ್ತಡಗಳಿದ್ದು, ಗ್ರಾಮ ಮಟ್ಟದಲ್ಲಿ ತೆರೆಯಲಾಗಿರುವ ಆರೋಗ್ಯ ಕ್ಷೇಮ ಕೇಂದ್ರ ಒತ್ತಡವನ್ನು ನಿವಾರಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿನ ಬಗ್ಗೆ ಬಹಳಷ್ಟು ಪ್ರಚುರ ಪಡಿಸಿ ಗ್ರಾಮದ ಜನರು ಆರೋಗ್ಯ ಕೇಂದ್ರದ ಸದುಪಯೋಗ ಪಡೆಯಲು ಸಹಕರಿಸುವಂತೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಎಂ.ಸುಧೀರ್ ಕುಮಾರ್ ಶೆಟ್ಟಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನುಡಿದರು. ಹಾಗೂ ಆರೋಗ್ಯ ಕೇಂದ್ರಕ್ಕೆ ತಪಾಸಣಾ ಉಪಕರಣಗಳನ್ನು ಹಸ್ತಾಂತರಿಸಿದರು.

ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಶಿಕಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಪಂ. ಉಪಾಧ್ಯಕ್ಷರಾದ ಯಶೋಧ, ಇ.ಸೇ.ಸ.ಸಂಘದ ಉಪಾಧ್ಯಕ್ಷರಾದ ರಾಮ ಭಟ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ, ನಿರ್ದೇಶಕರಾದ ಸುಂದರ ಗೌಡ, ಪಂ.ಸದಸ್ಯರುಗಳಾದ ಚಿದಾನಂದ, ಪ್ರಶಾಂತ್, ಸಿದ್ದಿಕ್‌ ಆಲಿ, ಪುರುಷೋತ್ತಮ, ಸಂಜೀವ, ಲಲಿತಾ, ಹರಿಣಾಕ್ಷಿ, ಹಾ. ಉ.ಸ. ಸಂಘದ ಕಾರ್ಯದರ್ಶಿ ತಿಮ್ಮಪ್ಪ ಎಂ., ಗ್ರಾಮ ಪಾಥಮಿಕ ಆರೋಗ್ಯ ಸುರಕ್ಷಾಧಿಕಾರಿಯವರಾದ ತಮಿಳ್‌ ಸೆಲ್ವಿ, ಕವಿತಾ, ಸಮುದಾಯ ಆರೋಗ್ಯಾಧಿಕಾರಿ ಕ್ಲೆಮೆ೦ಟಿನಾ ಉಷ, ಓಜಾಳ ಶಾಲೆಯ ಮುಖ್ಯೋಪಾಧ್ಯಾಯರಾದ ಸಂಜೀವ ಎಂ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪಂ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಹಾಜರಿದ್ದರು, ಪಿಡಿಓ ಗೋಕುಲ್‌ ದಾಸ್ ಭಕ್ತ ಇವರು ಸ್ವಾಗತಿಸಿ, ಧನ್ಯವಾದವಿತ್ತರು.

- Advertisement -

Related news

error: Content is protected !!