Tuesday, April 30, 2024
spot_imgspot_img
spot_imgspot_img

ಬಿಸಿ ಬಿಸಿ ಕಾಫಿ ಕುಡಿದು ನಾಲಿಗೆ ಸುಟ್ಟು ಹೋಗಿದ್ದರೆ, ಈ ಟಿಪ್ಸ್ ಟ್ರೈ ಮಾಡಿ

- Advertisement -G L Acharya panikkar
- Advertisement -

ಅಚಾನಕ್ಕಾಗಿ ಯಾರ ಬಳಿಯೋ ಮಾತನಾಡಿಕೊಂಡು ಬಿಸಿಯಾಗಿರುವ ಕಾಫಿ, ಟೀ ಅಥವಾ ಬಾದಾಮಿ ಹಾಲನ್ನು ಕುಡಿದು ನಾಲಿಗೆ ಸುಟ್ಟುಕೊಂಡಿರುವವರಿಗೆ ಇವುಗಳಿಗಿಂತ ಬೇರೆ ಟಿಪ್ಸ್ ಬೇಕಾಗಿಲ್ಲ.

ನಾವು ವಿವಿಧ ಸಂದರ್ಭಗಳಲ್ಲಿ ವಿವಿಧ ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತೇವೆ. ಕೆಲವೊಮ್ಮೆ ನಮ್ಮ ದೇಹ ಬಿಸಿಯಾದ ಆಹಾರವನ್ನು ಕೇಳುತ್ತದೆ ಇನ್ನು ಕೆಲವೊಮ್ಮೆ ತಂಪಾದ ಆಹಾರ ಸಾಕು ಎನ್ನುತ್ತದೆ. ಬಿಸಿಯಾದ ಆಹಾರ ಅಥವಾ ಪಾನೀಯ ದೇಹವನ್ನು ಬೆಚ್ಚಗಾಗಿಸುತ್ತದೆ. ತಂಪಾದ ಆಹಾರ ನಮ್ಮ ದೇಹವನ್ನು ತಂಪು ಮಾಡುತ್ತದೆ. ಬಿಸಿಯಾದ ಆಹಾರ ಅಥವಾ ಪಾನೀಯ ಒಂದು ವೇಳೆ ತುಂಬಾ ಬಿಸಿಯಾಗಿದ್ದರೆ, ಅದರಿಂದ ನಮ್ಮ ನಾಲಿಗೆ, ಬಾಯಿ ಗಂಟಲು ಸುಟ್ಟು ಹೋಗುತ್ತದೆ.

ತಣ್ಣೀರಿನಿಂದ ಬಾಯಿ ಮುಕ್ಕಳಿಸುವುದರಿಂದ ನಾಲಿಗೆ ಸುಟ್ಟು ಹೋದ ತಕ್ಷಣ ಈ ರೀತಿ ಮಾಡುವುದರಿಂದ ನಿಮಗೆ ಸಾಕಷ್ಟು ಆರಾಮ್ ಎನಿಸುತ್ತದೆ. ಏಕೆಂದರೆ ಇದು ತೊಂದರೆಗೆ ಒಳಗಾಗಿರುವ ನಾಲಿಗೆಯ ಭಾಗಕ್ಕೆ ಸಾಕಷ್ಟು ತಂಪು ನೀಡುತ್ತದೆ ಮತ್ತು ನೋವು ಹಾಗೂ ಉರಿಯಿಂದ ರಕ್ಷಿಸುತ್ತದೆ.
ತಂಪಾದ ನೀರಿನ ಬದಲು ಬೇಕೆಂದರೆ ನೀವು ಐಸ್ ಕ್ಯೂಬ್ ಗಳನ್ನು ಸಹ ಸುಟ್ಟು ಹೋದ ನಾಲಿಗೆಯ ಭಾಗದ ಮೇಲೆ ಇಟ್ಟುಕೊಳ್ಳಬಹುದು. ಇದರಿಂದ ನಿಮಗೆ ತಕ್ಷಣವೇ ಪರಿಹಾರ ಸಿಗುತ್ತದೆ.

ಜೇನುತುಪ್ಪ ಕೂಡ ನಿಮ್ಮ ಸುಟ್ಟ ನಾಲಿಗೆಯನ್ನು ಮತ್ತೆ ಸರಿಪಡಿ ಸುವ ಕೆಲಸ ಮಾಡುತ್ತದೆ. ಸ್ವಲ್ಪ ಪ್ರಮಾಣದಲ್ಲಿ ಜೇನುತುಪ್ಪ ವನ್ನು ತೆಗೆದು ಕೊಂಡು ಗಾಯ ಆಗಿರುವ ನಾಲಿಗೆಯ ಮೇಲೆ ಸವರಿ ಸ್ವಲ್ಪ ಹೊತ್ತು ಬಿಡಿ.
ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳು ಇರುವುದ ರಿಂದ ಬಹಳ ಬೇಗನೆ ವಾಸಿಯಾಗುತ್ತದೆ. ಜೊತೆಗೆ ಜೇನುತುಪ್ಪ ಸಿಹಿ ಇರುವುದರಿಂದ ನೀವು ಇದನ್ನು ಖುಷಿಯಾಗಿ ಸವಿಯಬಹುದು.​

ನಿಮಗೆಲ್ಲಾ ಗೊತ್ತಿರುವ ಹಾಗೆ ಬಾಯಲ್ಲಿ ಹುಣ್ಣುಗಳು ಉಂಟಾದರೆ ಹಾಲಿನ ಕೆನೆಯನ್ನು ಅಥವಾ ಬೆಣ್ಣೆಯನ್ನು ಸವರುತ್ತಾರೆ. ಹಾಗಾಗಿ ಹಾಲು ಮತ್ತು ಮೊಸರು ಮತ್ತು ಇನ್ನಿತರ ಯಾವುದೇ ಡೈರಿ ಉತ್ಪನ್ನಗಳು ಸುಟ್ಟ ನಾಲಿಗೆಗೆ ರಾಮಬಾಣವಾಗಿ ಕೆಲಸ ಮಾಡುತ್ತವೆ.
ನಾಲಿಗೆಯ ಮೇಲೆ ತಂಪಾದ ಪ್ರಭಾವವನ್ನು ಬೀರಿ ಉರಿ ಮತ್ತು ನೋವಿನಿಂದ ನಾಲಿಗೆಯನ್ನು ರಕ್ಷಿಸುತ್ತದೆ. ಬೇಕೆಂದರೆ ನೀವು ತಂಪಾದ ಹಾಲನ್ನು ಈ ಸಂದರ್ಭದಲ್ಲಿ ಸೇವಿಸಬಹುದು.​

ಸುಟ್ಟ ನಾಲಿಗೆಗೆ ಮನೆಯಲ್ಲೇ ಮಾಡಿಕೊಳ್ಳಬಹುದಾದ ಮತ್ತೊಂದು ಪರಿಹಾರ ಎಂದರೆ ಅದು ಉಪ್ಪಿನ ನೀರಿನಿಂದ ಬಾಯಿ ಮುಕ್ಕಳಿಸು ವುದು. ಒಂದು ಟೀ ಚಮಚ ಪುಡಿ ಉಪ್ಪನ್ನು ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಇದನ್ನು ಬಾಯಿಯಲ್ಲಿ ಸುರಿದುಕೊಂಡು ಒಂದರಿಂದ ಎರಡು ನಿಮಿಷ ಗಳ ಕಾಲ ಚೆನ್ನಾಗಿ ಬಾಯಿ ಮುಕ್ಕಳಿಸಿ. ಯಾವುದೇ ಕಾರಣಕ್ಕೂ ಇದನ್ನು ನುಂಗಬೇಡಿ. ಹೊರಗೆ ಉಗಿದುಬಿಡಿ. ಇದರಿಂದ ಉರಿಯುತ ಮತ್ತು ನೋವು ನಿವಾರಣೆ ಸಾಧ್ಯವಾಗುತ್ತದೆ.

- Advertisement -

Related news

error: Content is protected !!