Sunday, May 5, 2024
spot_imgspot_img
spot_imgspot_img

ಫೇಸ್‌ಬುಕ್‌ನಲ್ಲಿ ಕಡಿಮೆ ಬೆಲೆಗೆ ಐಫೋನ್‌ ಜಾಹೀರಾತು; ನಂಬಿದ ವ್ಯಕ್ತಿಗೆ ₹7.29 ಲಕ್ಷ ಪಂಗನಾಮ!

- Advertisement -G L Acharya panikkar
- Advertisement -

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಪ್ರಕಟವಾಗಿದ್ದ ಜಾಹೀರಾತು ನೋಡಿ ಐಫೋನ್‌ ಖರೀದಿಸಲು ಮುಂದಾಗಿದ್ದ ವ್ಯಕ್ತಿಯೊಬ್ಬರು 7.29 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಫೇಸ್‌ಬುಕ್‌ನಲ್ಲಿ ತೆರೆಯಲಾಗಿರುವ ‘ಅಬುಬಿ ಸ್ಪೋರ್ಟ್‌’ ಪುಟದಲ್ಲಿ ಜಾಹೀರಾತು ನೀಡಿದ್ದ ಆರೋಪಿ, ಕಡಿಮೆ ದರದಲ್ಲಿ ಐಫೋನ್‌ಗಳು ಮಾರಾಟಕ್ಕಿವೆ ಎಂದಿದ್ದ. ಅದನ್ನು ನಂಬಿದ್ದ ವ್ಯಕ್ತಿ, ಐ-ಫೋನ್‌ ಖರೀದಿಸುತ್ತೇನೆ ಎಂದು ಹೇಳಿ ಆರೋಪಿಗೆ ಸಂದೇಶ ಕಳುಹಿಸಿದ್ದರು. ಆತನ ಮೊಬೈಲ್‌ ನಂಬರ್‌ ಪಡೆದು ಮಾತನಾಡಿದ್ದರು.

ಮುಂಗಡವಾಗಿ ಹಣ ಪಾವತಿ ಮಾಡಿದರೆ ಐ-ಫೋನ್‌ ನೀಡುವುದಾಗಿ ಆರೋಪಿ ಹೇಳಿದ್ದ. ಅದನ್ನೂ ನಂಬಿದ್ದ ವ್ಯಕ್ತಿ, ಆರೋಪಿ ಹೇಳಿದ್ದ ಖಾತೆಗಳಿಗೆ ಜುಲೈ 26ರಿಂದ 30ರವರೆಗೆ ಹಂತ ಹಂತವಾಗಿ 7.29 ಲಕ್ಷ ಪಾವತಿಸಿದ್ದರು. ಅದಾದ ಬಳಿಕ ಆರೋಪಿ ಮೊಬೈಲ್‌ ಕೊಟ್ಟಿಲ್ಲ. ಹಣವನ್ನೂ ವಾಪಸು ನೀಡಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಐ-ಫೋನ್‌ ಮಾರಾಟದ ಹೆಸರಿನಲ್ಲಿ ಜನರಿಂದ ಹಣ ಪಡೆದು ವಂಚಿಸಲೆಂದೇ ಆರೋಪಿ, ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದಿರುವುದು ಗೊತ್ತಾಗುತ್ತಿದೆ. ಇಂಟರ್‌ನೆಟ್‌ ಪ್ರೋಟೊಕಾಲ್‌ (ಐ.ಪಿ) ಮಾಹಿತಿ ಆಧರಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.

- Advertisement -

Related news

error: Content is protected !!