Tuesday, June 23, 2026
spot_imgspot_img
spot_imgspot_img

ಬೆಳ್ತಂಗಡಿ : ಅಕ್ರಮವಾಗಿ ಗಾಂಜಾ ಸಾಗಾಟ : ಸ್ಕೂಟರ್ ಸಹಿತ ಇಬ್ಬರು ಆರೋಪಿಗಳು ಪೊಲೀಸ್ ವಶ

- Advertisement -
- Advertisement -

ಬೆಳ್ತಂಗಡಿ : ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಕಳಿಯ ಗ್ರಾಮದ ಗೇರುಕಟ್ಟೆ ಬಳಿಯ ಓಡುರೊಟ್ಟು ಎಂಬಲ್ಲಿ ನಡೆದಿದೆ.

ಗೇರುಕಟ್ಟೆ ಕಳಿಯಾ ನಿವಾಸಿ ಉಮ್ಮರ್ ಫಾರೂಕ್, ಸೊಮಂತಡ್ಕ ಮೂಂಡಜೆ ನಿವಾಸಿ ಸತೀಶ್ (ಸ್ಕಾರ್ಪಿಯೋ ಸತೀಶ್) ಬಂಧಿತರು.

ಬೆಳ್ತಂಗಡಿ ಪೊಲೀಸ್ ಠಾಣಾ ಪಿಎಸ್‌ಐ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳು ಕಳಿಯ ಗ್ರಾಮದ ಗೇರುಕಟ್ಟೆ ಬಳಿ ಓಡುರೊಟ್ಟು ಎಂಬಲ್ಲಿ ಸ್ಕೂಟಿಯೊಂದಿಗೆ ಅನುಮಾನಾಸ್ಪದವಾಗಿ ನಿಂತಿದ್ದ, ಉಮ್ಮರ್ ಫಾರೂಕ್ ಹಾಗೂ ಸತೀಶ್ ಎಂಬವರುಗಳನ್ನು ತಪಾಸಣೆ ನಡೆಸಿದಾಗ, ಸದ್ರಿ ಆರೋಪಿಗಳ ವಶದಲ್ಲಿ ಅಂದಾಜು 50000/- ರೂ ಮೌಲ್ಯದ 2.10 ಕೆ.ಜಿ ಗಾಂಜಾ ಹಾಗೂ ಸತೀಶ್ ವಶದಲ್ಲಿ ರೂ 1000/- ಮೌಲ್ಯದ 55 ಗ್ರಾಂ ತೂಕದ ಗಾಂಜಾ ಪತ್ತೆಯಾಗಿರುತ್ತದೆ.
ಮುಂದಿನ ಕಾನೂನುಕ್ರಮಕ್ಕಾಗಿ ಸದ್ರಿ ಗಾಂಜಾ, ಕೃತ್ಯಕ್ಕೆ ಬಳಸಿದ ಸ್ಕೂಟರ್ ನ್ನು ಆರೋಪಿಗಳೊಂದಿಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 25/2024 ಕಲಂ: 8( c ) ,20(b) NDPS ACT ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!