Tuesday, March 2, 2021

ನಕಲಿ ಪಾರ್ಸ್‍ಪೋರ್ಟ್ ದಂಧೆ – 6 ಮಂದಿ ಆರೋಪಿಗಳ ಬಂಧನ

ಹೈದರಾಬಾದ್: ತೆಲಂಗಾಣದ ನಿಜಾಮಬಾದ್‍ನಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಪಾರ್ಸ್‍ಪೋರ್ಟ್ ತಯಾರಿಸುತ್ತಿದ್ದ ಗ್ಯಾಂಗ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ನಕಲಿ ಪಾರ್ಸ್‍ಪೋರ್ಟ್ ತಯಾರಿಸುವ ದಂಧೆಯಲ್ಲಿ ಓರ್ವ ಬಾಂಗ್ಲದೇಶದ ಪ್ರಜೆಯು ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಕುರಿತಂತೆ ತನಿಖೆ ನಡೆಯುತ್ತಿದ್ದು, ಇಲ್ಲಿಯವರೆಗೂ ಯಾರಿಗೆ ಪಾಸ್‍ಪೋರ್ಟ್‍ಗಳು ದೊರೆತಿವೆ ಹಾಗೂ ಈ ದಂಧೆಯಲ್ಲಿ ಯಾರು ಕೆಲಸ ಮಾಡಿದ್ದಾರೆ ಎಂಬುವುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

MOST POPULAR

HOT NEWS

Related news

error: Content is protected !!