- Advertisement -
- Advertisement -






ಪಾಕಿಸ್ತಾನಕ್ಕೆ 19ಸಾವಿರ ಕೋಟಿ ಸಾಲ ಮಂಜೂರು ಮಾಡಿದ್ದ ಅಂತಾರಾಷ್ಟ್ರೀಯ ಹಣಕಾಸು ನಿಧಿ ಇದೀಗ ತನ್ನ ವರಸೆ ಬದಲಿಸಿದೆ. ಸಾಲದ ಹಣ ಬಿಡುಗಡೆ ಮಾಡುವುದಕ್ಕೆ ಮೊದಲೇ 11ಹೊಸ ಷರತ್ತುಗಳನ್ನು ಪಾಕ್ ಕ್ಕೆ ವಿಧಿಸಿದೆ.
ಜೊತೆಗೆ ಷರತ್ತು ಪಾಲಿಸದಿದ್ದರೆ ಹಣ ಸಿಗುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. ತನ್ನ ವಿಸ್ತ್ರತ ನಿಧಿ ಸೌಲಭ್ಯ ಅಡಿಯಲ್ಲಿ ಸಾಲ ಮಂಜೂರು ಮಾಡಿದ್ದ IMF 11 ಹೊಸ ಷರತ್ತು ವಿಧಿಸಿದೆ. ಇದರಿಂದ ಪಾಕ್ ಮೇಲೆ ಈವರೆಗೆ ವಿಧಿಸಿರುವ ಒಟ್ಟು ಷರತ್ತು 50ಕ್ಕೆ ಏರಿಕೆಯಾಗಿದೆ.ಈ ಷರತ್ತು ಪೂರೈಸದಿದ್ದರೆ ಮುಂದಿನ ಕಂತಿನ ಹಣ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದೆ.
- Advertisement -