Tuesday, June 16, 2026
spot_imgspot_img
spot_imgspot_img

64 ವರ್ಷಗಳ ಬಳಿಕ ಗುಜರಾತ್‌ನಲ್ಲಿ ಎಐಸಿಸಿ ಮಹತ್ವದ ಅಧಿವೇಶನ

- Advertisement -
- Advertisement -

ಅಹಮದಾಬಾದ್: 64 ವರ್ಷಗಳ ಬಳಿಕ ಇಂದು ಮತ್ತು ನಾಳೆ ಗುಜರಾತ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ಎಐಸಿಸಿ ಮಹತ್ವದ ಅಧಿವೇಶನ ನಡೆಯಲಿದೆ.

ಶಾಹಿಬಾಗ್‌ನಲ್ಲಿರುವ ಐತಿಹಾಸಿಕ ಸರ್ದಾರ್ ಸ್ಮಾರಕದಲ್ಲಿ ಇಂದು ಮತ್ತು ನಾಳೆ ರಾಷ್ಟ್ರಮಟ್ಟದಲ್ಲಿ ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ 3,000ಕ್ಕೂ ಅಧಿಕ ನಾಯಕರು ಭಾಗವಹಿಸಲಿದ್ದಾರೆ.

ಈ ಅಧಿವೇಶನದಲ್ಲಿ ಕಾಂಗ್ರೆಸ್ ಸಂಘಟನೆಗೆ ಒತ್ತು ನೀಡಲಿದ್ದು, ಪಕ್ಷದ ಪುನಶ್ಚೇತನಕ್ಕೆ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. ಈ ಸಭೆಯಲ್ಲಿ ಸಂಘಟನೆ, ತಂತ್ರಗಾರಿಗೆ ಸಂಬಂಧ ಹಲವು ಆಯಾಮಗಳಲ್ಲಿ ಚರ್ಚೆ ನಡೆಯಲಿದ್ದು, ಮುಂಬರುವ ಚುನಾವಣೆಗೆ ಸಂಘಟನಾತ್ಮಕ ಕಾರ್ಯತಂತ್ರದ ಪರಿಷ್ಕರಣೆ ನಡೆಯಲಿದೆ. ಸಂಘಟನಾ ಅಧಿಕಾರದ ವಿಕೇಂದ್ರೀಕರಣ, ಮೈತ್ರಿ ನಿರ್ವಹಣೆ ಮತ್ತು ಸಾರ್ವಜನಿಕ ಸಂಪರ್ಕದ ಕುರಿತಾಗಿಯೂ ಚರ್ಚೆ ನಡೆಯಲಿದೆ.

- Advertisement -

Related news

error: Content is protected !!