- Advertisement -
- Advertisement -

2024-25 ನೇ ಸಾಲಿನ 15 ನೇ ಹಣಕಾಸು ಯೋಜನೆಯ 2.50 ಲಕ್ಷ ಮತ್ತು 2023-24 ನೇ ಸಾಲಿನ 15 ನೇ ಹಣಕಾಸು ಯೋಜನೆಯ 2 ಲಕ್ಷ ಒಟ್ಟು 4.50 ಲಕ್ಷ ರೂ ಅನುದಾನದ ಚಂದಳಿಕೆ-ಬದನಾಜೆ ರಸ್ತೆ ಅಭಿವೃದ್ಧಿಯ ಉದ್ಘಾಟನಾ ಕಾರ್ಯಕ್ರಮವು 4 ನೇ ವಾರ್ಡ್‌ನ ಚಂದಳಿಕೆ ಸಮೀಪದ ಬದನಾಜೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಬಿಜೆಪಿ ಪುತ್ತೂರು ಮಂಡಲ ಕಾರ್ಯದರ್ಶಿ ಶ್ರೀ ಕೃಷ್ಣ ವಿಟ್ಲ, ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರವೀಶ್ ವಿಟ್ಲ, ಸದಸ್ಯೆ ರಕ್ಷಿತಾ ಸನತ್ ಸಾಲಿಯಾನ್ ಚಂದಳಿಕೆ, ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನರ್ಸಪ್ಪ ಪೂಜಾರಿ ನಿಡ್ಯ, ಶಕ್ತಿ ಕೇಂದ್ರದ ಅಧ್ಯಕ್ಷ ಸದಾನಂದ ಗೌಡ ಡೆಪ್ಪಿನಿ, 4 ನೇ ವಾರ್ಡ್ ನ ಬಿಜೆಪಿ ಅಧ್ಯಕ್ಷ ತಿರುಮಲೇಶ್ವರ ಗೌಡ ನಿಡ್ಯ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಕುಲಾಲ್ ಅಬೀರಿ ಮತ್ತು ಬಿಜೆಪಿ ಪಕ್ಷದ ಪದಾಧಿಕಾರಿಗಳು ಮತ್ತು ಬದನಾಜೆ ಗ್ರಾಮಸ್ಥರು ಭಾಗವಹಿಸಿದ್ದರು.
- Advertisement -