Tuesday, July 8, 2025
spot_imgspot_img
spot_imgspot_img

ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರು ಕಂಪೆನಿ ನಿಯಮಿತ ವಿಟ್ಲ- ಕಲ್ಲಕಟ್ಟ ಇದರ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

- Advertisement -
- Advertisement -

ಪಿಂಗಾರ ಬಂಗಾರವಾಗಲಿ- ಒಡಿಯೂರು ಶ್ರೀ

ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರು ಕಂಪೆನಿ ನಿಯಮಿತ ವಿಟ್ಲ- ಕಲ್ಲಕಟ್ಟ ಇದರ ನೂತನ ಕಟ್ಟಡದ ಉದ್ಘಾಟನೆ ಹಾಗೂ ಹಲಸು ಮೇಳ ಕಾರ್ಯಕ್ರಮ ವಿಟ್ಲ ಕಸಬಾದ ನೆಲ್ಲಿಗುಡ್ಡೆಯಲ್ಲಿ ನಡೆಯಿತು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವನಂದ ಸ್ವಾಮೀಜಿಯವರು ದೀಪ ಬೆಳಗಿಸಿ ನೂತನ ಕಟ್ಟಡವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಶ್ರೀಗಳು ಪಿಂಗಾರ ಬಂಗಾರವಾಗಲಿ ಎಂದು ಸಂಸ್ಥೆಗೆ ಹಾರೈಸಿ ಶುಭ ಆಶೀರ್ವಚನ ನೀಡಿದರು.

ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ ಇದರ ಅಧ್ಯಕ್ಷರು ರಾಮ್‌ಕಿಶೋರ್‌ ಕೆ ಮಂಚಿ ಇವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ಡಿ ಮಂಜುನಾಥ. ಉಪನಿರ್ದೇಶಕರಿ ತೋಟಗಾರಿಕಾ ಇಲಾಖೆ ಮಂಗಳೂರು, ಅಶೋಕ್‌ ಕುಮಾರ್‌ ಕೆ ಎಸ್‌ ಮಾಲಕರು ಮಾ ಇಂಟಿಗ್ರೇಟರ್‍ಸ್‌ ಬೆಂಗಳೂರು, ಪ್ರಕಾಶ್‌ ಎಂ ಎಸ್, ರೀಜನಲ್‌ ಹೆಡ್‌ ರೂರಲ್‌ ಬ್ಯಾಂಕಿಂಗ್‌ ಗ್ರೂಪ್‌ HDFC ಬ್ಯಾಂಕ್‌ ಲಿಮಿಟೆಡ್‌, ಹಾಗೂ ರಾಜೇಶ್‌ ವಿಜ್ಞಾನಿ, CPCRI ಕಾಸರಗೋಡು ಇವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ನೂತನ ಕಟ್ಟಡ ಶುಭಾರಂಭ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರು ಕಂಪೆನಿ ನಿಯಮಿತ ಇದರ ನಿರ್ದೇಶಕ ಶ್ಯಾಮಮ ಸುಂದರ್‌ ಎನ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರ್ದೇಶಕ ರಾಜರಾಮ್‌ ಭಟ್‌ ಸಿ ಸ್ವಾಗತಿಸಿ, ನಿರ್ದೇಶಕ ರಮೇಶ್‌ ಎನ್‌ ಧನ್ಯವಾದಗೈದರು.

- Advertisement -

Related news

error: Content is protected !!