Tuesday, July 1, 2025
spot_imgspot_img
spot_imgspot_img

ಕೊರೊನಾ ನಂತರದ ಜಗತ್ತು ರೂಪಿಸುವಲ್ಲಿ ಭಾರತ-ಆಸ್ಟ್ರೇಲಿಯಾ ಸಹಭಾಗಿತ್ವ ಪ್ರಮುಖ ಪಾತ್ರ ವಹಿಸಲಿದೆ- ಪ್ರಧಾನಿ ಮೋದಿ

- Advertisement -
- Advertisement -

ನವದೆಹಲಿ: ಭಾರತ-ಆಸ್ಟ್ರೇಲಿಯಾ ಸಹಭಾಗಿತ್ವವು ಕೊರೊನಾ ನಂತರದ ಜಗತ್ತು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.

ಇಂಡಿಯಾ ಆಸ್ಟ್ರೇಲಿಯಾ ಆರ್ಥಿಕತೆಯ ಬಗೆಗಿನ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಯುವ ಜನರ ಶಕ್ತಿ, ಕ್ರಿಯಾಶೀಲನೆ ಹಾಗೂ ದೂರಾಲೋಚನೆ ಬಗ್ಗೆ ನನಗೆ ವಿಶ್ವಾಸವಿದೆ. ಯುವ ಜನರು ನಮ್ಮ ಎರಡು ದೇಶಗಳಿಗೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಸುಸ್ಥಿರ ಮತ್ತು ಸಮಗ್ರ ಪರಿಹಾರ ಒದಗಿಸಬಹುದು.

ಭಾರತ-ಆಸ್ಟ್ರೇಲಿಯಾ ಸಹಭಾಗಿತ್ವವು ಕೊರೊನಾ ನಂತರದ ಜಗತ್ತು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.

ವಸ್ತುಗಳ ಮರುಬಳಕೆ, ತ್ಯಾಜ್ಯವನ್ನು ತೆಗೆದುಹಾಕುವುದು, ಸಂಪನ್ಮೂಲವನ್ನು ಕಾಪಾಡುವುದು ನಮ್ಮ ಜೀವನದ ಒಂದು ಭಾಗವಾಗಬೇಕು. ಈ ಹ್ಯಾಕಥಾನ್ ಕಾರ್ಯಕ್ರಮವು ಭಾರತೀಯ ಹಾಗೂ ಆಸ್ಟ್ರೇಲಿಯಾದ ವಿದ್ಯಾರ್ಥಿಗಳಿಗೆ, ಉದ್ಯಮಿಗಳಿಗೆ ನವೀನ ಪರಿಹಾರವಾಗಿದೆ ಎಂದು ಹೇಳಿದರು.

- Advertisement -

Related news

error: Content is protected !!