Wednesday, June 17, 2026
spot_imgspot_img
spot_imgspot_img

‘ಸಲಾರ್’ ಸಿನಿಮಾ ಫ್ಲೆಕ್ಸ್ ಹಾಕುತ್ತಿದ್ದ ಪ್ರಭಾಸ್ ಅಭಿಮಾನಿ ಸಾವು

- Advertisement -
- Advertisement -

ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಇಂದು ವಿಶ್ವದಾದ್ಯಂತ ರಿಲೀಸ್ ಆಗಿದೆ. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಸಲಾರ್ ಸಿನಿಮಾದ ಫ್ಲೆಕ್ಸ್ ಹಾಕುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿರುವ ಘಟನೆ ಆಂಧ್ರದ ಧರ್ಮಾವರಂನಲ್ಲಿ ನಡೆದಿದೆ.

ಮೃತಪಟ್ಟಿರುವ ಅಭಿಮಾನಿ ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ಪಟ್ಟಣದ ಬಾಲರಾಜು ಎಂದು ಗುರುತಿಸಲಾಗಿದೆ.

ಧರ್ಮಾವರಂ ಪಟ್ಟಣದ ರಂಗ ಚಿತ್ರಮಂದಿರ ಮುಂದೆ ತನ್ನ ನೆಚ್ಚಿನ ನಾಯಕ ಪ್ರಭಾಸ್ ಅವರ ಫ್ಲೆಕ್ಸ್ ಹಾಕುತ್ತಿದ್ದ ಬಾಲರಾಜು ಮತ್ತು ಗೆಳೆಯರಿಗೆ ವಿದ್ಯುತ್ ಶಾಕ್ ತಗುಲಿದೆ. ಬಾಲರಾಜು ಮೃತಪಟ್ಟಿದ್ದರೆ, ಗಜೇಂದ್ರ ಎಂಬ ಯುವಕನಿಗೆ ಗಾಯಗಳಾಗಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Related news

error: Content is protected !!