- Advertisement -
- Advertisement -
ನವದೆಹಲಿ: ದೇಶದಲ್ಲಿ ಕೊರೊನಾ ಮಹಾಮಾರಿ ಆರ್ಭಟಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ 35 ಸಾವಿರ ಮಂದಿಗೆ ಕೊರೊನಾ ವಕ್ಕರಿಸಿಕೊಂಡಿದೆ. ಹೀಗಾಗಿ ಈವರೆಗೆ ಸೋಂಕಿಗೀಡಾಗಿರುವವರ ಸಂಖ್ಯೆ 10,38,716 ಕ್ಕೆ ಏರಿಕೆಯಾಗಿದೆ.
ಈ ಬಗ್ಗೆ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಇನ್ನು ಒಂದೇ ದಿನ ಕೊರೊನಾ ಹೆಮ್ಮಾರಿಗೆ 671 ಮಂದಿ ಬಲಿಯಾಗಿದ್ದಾರೆ. ಹೀಗಾಗಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 26,273ಕ್ಕೆ ಏರಿದೆ. ಇನ್ನು 6,53,751 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 3,58,692 ಪ್ರಕರಣಗಳು ಸಕ್ರೀಯವಾಗಿದೆ ಎಂದು ತಿಳಿಸಿದೆ.
- Advertisement -