Wednesday, April 24, 2024
spot_imgspot_img
spot_imgspot_img

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಗೆ ಭಾರತ ತಂಡದ 11 ಆಟಗಾರರ ಪಟ್ಟಿ ಪ್ರಕಟ..!!

- Advertisement -G L Acharya panikkar
- Advertisement -

ಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರ ಅಡಿಲೇಡ್‌ನಲ್ಲಿ ಈ ಪಂದ್ಯ ಆರಂಭವಾಗಲಿದ್ದು ಈ ಪಂದ್ಯ ಡೇ-ನೈಟ್ ಪಂದ್ಯವಾಗಿ ಸಾಗಲಿದೆ. ಈ ಪಂದ್ಯಕ್ಕೆ ಟೀಮ್ ಇಂಡಿಯಾದ ಆಡುವ 11 ಆಟಗಾರರ ಪಟ್ಟಿಯನ್ನು ಬಿಸಿಸಿಐ ಘೋಷಿಸಿದೆ.

ಅಡಿಲೇಡ್​​ ಮೈದಾನದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಐತಿಹಾಸಿಕ ಪಿಂಕ್​ ಬಾಲ್​​ ಟೆಸ್ಟ್ ಪಂದ್ಯ ನಡೆಯಲಿದೆ. ಕನ್ನಡಿಗ ಕೆಎಲ್​ ರಾಹುಲ್​ಗೆ ಕೊಕ್​ ನೀಡಲಾಗಿದೆ. ಮಯಾಂಕ್​ ಅಗರ್​ವಾಲ್​, ಪೃಥ್ವಿ ಶಾ ಓಪನರ್​ ಆಗಿ ಕಣಕ್ಕಿಳಿಯಲಿದ್ದಾರೆ.

ಟೀಮ್ ಇಂಡಿಯಾ: ವಿರಾಟ್ ಕೊಹ್ಲಿ (ನಾಯಕ), ಮಯಾಂಕ್ ಅಗರ್ವಾಲ್, ಪೃಥ್ವಿ ಶಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ(ಉಪನಾಯಕ), ಹನುಮ ವಿಹಾರಿ, ವೃದ್ಧಿಮಾನ್ ಸಾಹ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ.

ಮಿಡಲ್​ ಆರ್ಡರ್​​ನಲ್ಲಿ ವಿರಾಟ್​ ಕೊಹ್ಲಿ, ಪೂಜಾರ, ರಹಾನೆ, ಹನುಮ ವಿಹಾರಿಗೆ ಅವಕಾಶ ನೀಡಲಾಗಿದ್ದು, ವಿಕೆಟ್​ ಕೀಪರ್ ಆಗಿ ವೃದ್ಧಿಮಾನ್​ ಸಹಾಗೆ ಮಣೆ ಹಾಕಲಾಗಿದೆ. ಸ್ಪಿನ್ನರ್​​ ಕೋಟಾದಲ್ಲಿ ಆರ್​​ ಅಶ್ವಿನ್​ಗೆ ಸ್ಥಾನ ಸಿಕ್ಕಿದೆ. ಮೊಹಮದ್​ ಶಮಿ, ಉಮೇಶ್​​ ಯಾದವ್​, ಜಸ್​ಪ್ರೀತ್​ ಬುಮ್ರಾ ವೇಗದ ಬಲವಾಗಿದ್ದಾರೆ.

- Advertisement -

Related news

error: Content is protected !!