Wednesday, July 3, 2024
spot_imgspot_img
spot_imgspot_img

ಭಾರತದ ಮುಡಿಗೆ ಟಿ20 ವಿಶ್ವಕಪ್‌ ಕಿರೀಟ

- Advertisement -G L Acharya panikkar
- Advertisement -

ಭಾರತ ಎರಡನೇ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದಿದೆ. ಬಾರ್ಬಡೋಸ್‌ನಲ್ಲಿ ನಡೆದ ಫೈನಲ್‌ನಲ್ಲಿ ಟೀಂ ಇಂಡಿಯಾ ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ರನ್‌ಗಳಿಂದ ಸೋಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿತು. ಉತ್ತರವಾಗಿ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 169 ರನ್ ಗಳಿಸಲಷ್ಟೇ ಶಕ್ತವಾಯಿತು.

ಕಿಂಗ್ ಕೊಹ್ಲಿಯ ಅಬ್ಬರದ ಅರ್ಧ ಶತಕ (76 ರನ್​) ರನ್ ಹಾಗೂ ಆಲ್​ರೌಂಡರ್ ಅಕ್ಷರ್ ಪಟೇಲ್​ ಅವರ ಸ್ಫೋಟಕ ಬ್ಯಾಟಿಂಗ್​ (47 ರನ್​, 31 ಎಸೆತ, 4 ಸಿಕ್ಸರ್​, 1 ಫೋರ್​) ನೆರವು ಹಾಗೂ ಕೊನೇ ಕ್ಷಣದ ರೋಚಕ ಹೋರಾಟ ಫಲವಾಗಿ ಭಾರತ ತಂಡ ವಿಶ್ವ ಕಪ್​ ಗೆದ್ದುಕೊಂಡಿತು. ಫೈನಲ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್​ಗಳ ರೋಚಕ ಗೆಲುವು ದಾಖಲಿಸಿ ಟ್ರೋಫಿ ಮುಡಿಗೇರಿಸಿಕೊಂಡಿತು. ಭಾರತದ ಪಾಲಿಗೆ ಇದು ಸ್ಮರಣೀಯ ಟ್ರೋಫಿ. ಹಿರಿಯ ಆಟಗಾರರಾದ ರೋಹಿತ್​ ಶರ್ಮಾ ಹಾಗೂ ವಿರಾಟ್​ ಕೊಹ್ಲಿಗೆ ಅಪೇಕ್ಷಿತ ಚಾಂಪಿಯನ್ ಪಟ್ಟ. ಅತ್ತ ದಕ್ಷಿಣ ಆಫ್ರಿಕಾ ತಂಡ ತನ್ನ ಚೋಕರ್ಸ್​ ಹಣೆಪಟ್ಟಿಯನ್ನು ಮತ್ತಷ್ಟು ದಿನ ಕಟ್ಟಿಕೊಳ್ಳುವಂತಾಯಿತು. 4 ದಶಕಗಳ ತನ್ನ ವಿಶ್ವ ಕಪ್​ ಅಭಿಯಾನದಲ್ಲಿ ಒಂದೇ ಒಂದು ಟ್ರೋಫಿ ಗೆಲ್ಲಲು ಸಾಧ್ಯವಾಗದೇ ನಿರಾಸೆ ಎದುರಿಸಿತು.

ಇದು ಭಾರತ ತಂಡಕ್ಕೆ 13 ವರ್ಷಗಳ ಬಳಿಕ ಸಿಕ್ಕ ವಿಶ್ವ ಕಪ್​ ಹಾಗೂ 17 ವರ್ಷಗಳ ಬಳಿಕ ದೊರೆತ ಟಿ20 ವಿಶ್ವ ಕಪ್​. ಭಾರತ ತಂಡ 2007ರ ಉದ್ಘಾಟನಾ ಆವೃತ್ತಿಯ ಟಿ20 ವಿಶ್ವ ಕಪ್​ ಗೆದ್ದಿದ್ದರೆ 2011ರ ಏಕ ದಿನ ವಿಶ್ವ ಕಪ್ ಗೆದ್ದುಕೊಂಡಿದೆ.

- Advertisement -

Related news

error: Content is protected !!