Monday, July 4, 2022
spot_imgspot_img
spot_imgspot_img

ಹಾಕಿಯಲ್ಲಿ ಮುಗ್ಗರಿಸಿದ ಭಾರತೀಯ ಪಡೆ; ಮುಂದೆ ಕಂಚಿಗಾಗಿ ಸೆಣಸಾಟ

- Advertisement -
- Advertisement -

ಟೋಕಿಯೊ ಒಲಿಂಪಿಕ್ಸ್ ಅಂಗಳದಲ್ಲಿ ಇಂದು ಭಾರತಕ್ಕೆ ನಿರಾಸೆಯಾಗಿದೆ. ಆದರೆ ಪದಕ ಗೆಲ್ಲುವ ಕನಸು ಇನ್ನೂ ಜೀವಂತವಾಗಿದೆ. ಅಂದರೆ ಬೆಲ್ಜಿಯಂ ತಂಡದ ವಿರುದ್ಧ ಸೆಮಿ ಫೈನಲ್ ನಲ್ಲಿ ಆಡಿದ ಭಾರತದ ಪುರುಷರ ಹಾಕಿ ತಂಡ ಸೋಲು ಕಂಡಿದ್ದರೂ ಕಂಚಿನ ಪದಕಕ್ಕೆ ಇನ್ನೂ ಒಂದು ಆಟ ಬಾಕಿಯಿದೆ.

ಇಂದು ನಡೆದ ಪಂದ್ಯದಲ್ಲಿ 5-2 ಅಂತರದಲ್ಲಿ ಭಾರತ ಹಾಕಿ ತಂಡ ಸೋಲನುಭವಿಸಿದೆ. ಪಂದ್ಯ ಮುಕ್ತಾಯ ನಂತರ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಸೋಲು-ಗೆಲುವು ಜೀವನದ ಭಾಗ. ನಮ್ಮ ಭಾರತದ ಪುರುಷರ ಹಾಕಿ ತಂಡ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಮುಂದಿನ ಪಂದ್ಯಕ್ಕೆ ಮತ್ತು ಭವಿಷ್ಯದ ಅಭಿಯಾನಕ್ಕೆ ತಂಡಕ್ಕೆ ಶುಭಾಶಯಗಳು, ನಮ್ಮ ಆಟಗಾರರ ಬಗ್ಗೆ ಹೆಮ್ಮೆಯಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

- Advertisement -

Related news

error: Content is protected !!