Saturday, June 28, 2025
spot_imgspot_img
spot_imgspot_img

ಭಾರತ ಪ್ರಜೆಗಳ ಎಂಟ್ರಿ ನಿರ್ಬಂಧಿಸಿದ ಚೀನಾ

- Advertisement -
- Advertisement -

ನವದೆಹಲಿ (ನ6): ಭಾರತ ಸೇರಿದಂತೆ ಹಲವು ದೇಶಗಳ ಪ್ರಜೆಗಳು ತನ್ನ ದೇಶಕ್ಕೆ ಬರುವುದನ್ನ ಚೀನಾ ತಾತ್ಕಾಲಿಕವಾಗಿ ನಿರ್ಬಂಧಿಸಿದೆ. ಕೊರೊನಾ ಸಾಂಕ್ರಾಮಿಕ ಹೆಚ್ಚುತ್ತಿರುವ ಹಿನ್ನೆಲೆ, ವಿದೇಶಿಗರಿಗೆ ಸೂಕ್ತ ವೀಸಾ ಹಾಗೂ ನಿವಾಸದ ಅನುಮತಿ ಇದ್ದರೂ ಕೂಡ ಚೀನಾ ಪ್ರವೇಶಿಸಲು ಅನುಮತಿ ನೀಡದಿರಲು ನಿರ್ಧರಿಸಲಾಗಿದೆ. ಭಾರತದ ಪ್ರಜೆಗಳಿಗೆ ಚೀನಾ ಈ ನಿರ್ಬಂಧ ವಿಧಿಸಿರುವ ಕುರಿತು ನವದೆಹಲಿಯಲ್ಲಿನ ಚೀನಾ ರಾಯಭಾರ ಕಚೇರಿ ತಿಳಿಸಿದೆ.

ಭಾರತ ಮಾತ್ರವಲ್ಲದೆ ಇತರೆ ದೇಶಗಳ ಪ್ರಜೆಗಳಿಗೂ ಚೀನಾ ಈ ಆದೇಶವನ್ನ ನೀಡಿದೆ ಎಂದು ಭಾರತ ಸರ್ಕಾರದ ಮೂಲಗಳು ತಿಳಿಸಿವೆ ಎಂದು ಹೇಳಲಾಗಿದೆ. ನವೆಂಬರ್​ 3ರ ನಂತರ ವಿತರಣೆಯಾದ ವೀಸಾ ಪಡೆದಿರುವವರಿಗೆ ಇದರಿಂದ ಯಾವುದೇ ಅಡ್ಡಿಯಿಲ್ಲ. ಬ್ರಿಟನ್, ಫ್ರಾನ್ಸ್​, ಬೆಲ್ಜಿಯಂ, ಬಾಂಗ್ಲಾದೇಶ  ಹಾಗೂ ಫಿಲಿಪೈನ್ಸ್​​ ಕೂಡ ಈ ನಿರ್ಬಂಧವನ್ನ ಎದುರಿಸಲಿವೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!