Thursday, April 25, 2024
spot_imgspot_img
spot_imgspot_img

ಕಾಪು: ಸಮುದ್ರದ ನಡುವೆ ಅಪಾಯದಲ್ಲಿ 9 ಮಂದಿ; ವಿಡಿಯೋ ಮೂಲಕ ರಕ್ಷಣೆಗೆ ಮನವಿ

- Advertisement -G L Acharya panikkar
- Advertisement -

ಕಾಪು: ನವಮಂಗಳೂರು ಬಂದರಿನ ಹೊರವಲಯದಲ್ಲಿ ಮೂರಿಂಗ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟಗ್ ಕೋರಂಗಲ ಆಪರೇಷನ್ ಮೈನ್ ಕಾಪು ಬಳಿ ಕಲ್ಲಿಗೆ ಢಿಕ್ಕಿಹೊಡೆದು ಅಪಾಯಕ್ಕೆ ಸಿಲುಕಿದೆ.

ಇದರಲ್ಲಿ 9 ಜನ ಸಿಬ್ಬಂದಿಗಳಿದ್ದು, ಅಪಾಯದಲ್ಲಿದ್ದಾರೆ. ಇದರಲ್ಲಿ ಅಪಾರ ಪ್ರಮಾಣದ ಡೀಸೆಲ್, ಆಯಿಲ್ ಇದೆ ಎಂದು ತಿಳಿದು ಬಂದಿದೆ. ದೂರದ ಸಮುದ್ರದಲ್ಲಿ ಮೂರಿಂಗ್ ಸೆಂಟರ್ ಇದ್ದು ತೈಲ ಕಚ್ಚಾ ಸರಕು ಹೊತ್ತು ತರುವ ಬೃಹತ್ ಹಡಗುಗಳಿಗೆ ಈ ಟಗ್ ಗಳು ನೆರವು ನೀಡುವ ಕೆಲಸ ಮಾಡುತ್ತಿದೆ. ಈ ಟಗ್ ಗುತ್ತಿಗೆ ಕಂಪನಿಯ ಗುತ್ತಿಗೆ ಕೊನೆಗೊಂಡಿದ್ದು, ನವಮಂಗಳೂರಿನ ಬಂದರಿನ ಹೊರ ವಲಯದಲ್ಲಿ ಆಂಕರ್ ಹಾಕುವಂತೆ ಬಂದರು ಮಂಡಳಿಯಿAದ ಸೂಚಿಸಲಾಗಿತ್ತು.

ಭಾರೀ ಗಾಳಿಗೆ ಆಂಕರ್ ತುಂಡಾಗಿ ಇದೀಗ ಕಾಪು ಸಮೀಪ ಕಾಣ ಅಪಘಾತಕ್ಕೀಡಾಗಿದೆ. ಇವರ ರಕ್ಷಣಾ ಕಾರ್ಯಾಚರಣೆಗೆ ಕೋಸ್ಟ್ ಗಾರ್ಡ್ ಗೆ ಹೆಲಿಕಾಪ್ಟರ್ ನ ನೆರವು ಮುಂಬೈನಿAದ ಬರಬೇಕಿದ್ದು, ಕೆಲವೇ ಗಂಟೆಗಳಲ್ಲಿ ರಕ್ಷಣೆ ನಡೆಯುವ ನಿರೀಕ್ಷೆಯಿದೆ.

ಕೋರಂಗಲ್ ವೆಸೆಲ್ ಬೋಟ್ ನಲ್ಲಿ ಇರುವವರ ಹೆಸರು : ಮುಲ್ಲಾ ಖಾನ್ (ಕ್ಯಾಪ್ಟನ್), ಗೌರವ್ ಕುಮಾರ್ (ಸೆಕೆಂಡ್ ಕ್ಯಾಪ್ಟನ್), ಶಾಂತನು ಎ.ವಿ., ರಾಹುಲ್, ದೀಪಕ್, ಪ್ರಶಾಂತ್, ತುಷಾರ್, ಲಕ್ಷ್ಮೀ ನಾರಾಯಣ್, ರೂಡ್ ಅಹಮದ್ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕೀ ರೋಸ್ ಕಂಪೆನಿಯ ಮ್ಯಾನೇಜರ್ ವೇಲು ತಿಳಿಸಿದ್ದಾರೆ.

ಕಾಪು ಲೈಟ್ ಹೌಸ್ ಬಳಿಯ ಬಂಡೆಯ ಮೇಲೆ ಸಿಲುಕಿಕೊಂಡಿರುವ ಕೋರಂಗಲ್ ಎಕ್ಸ್ ಪ್ರೆಸ್ ವೆಸೆಲ್ ಬೋಟ್ ನಲ್ಲಿ ಸಿಲುಕಿರುವವರ ರಕ್ಷಣೆಗೆ ಕರಾವಳಿ ಕಾವಲು ಪಡೆ, ಉಡುಪಿ ಜಿಲ್ಲಾ ಪೊಲೀಸ್ ಪಡೆ, ಕೀರೋಸ್ ಕಂಪೆನೆಯ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.

- Advertisement -

Related news

error: Content is protected !!