Sunday, August 2, 2026
spot_imgspot_img
spot_imgspot_img

ಇಂಡೋನೇಷ್ಯಾ: 271 ಜನರಿದ್ದ ಫೆರ‍್ರಿಯಲ್ಲಿ ಅಗ್ನಿ ಅವಘಡ – ಐವರು ಸಾವು, 41 ಮಂದಿ ನಾಪತ್ತೆ

- Advertisement -
- Advertisement -

ಜಕಾರ್ತಾ: ಇಂಡೋನೇಷ್ಯಾದ ಮಧುರಾ ದ್ವೀಪದ ಬಳಿ 271 ಜನರಿದ್ದ ಫೆರ‍್ರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಐವರು ಸಾವನ್ನಪ್ಪಿದ್ದಾರೆ. ಅವಘಡದಲ್ಲಿ 41 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಫೆರ‍್ರಿ ಸಮುದ್ರದಲ್ಲಿದ್ದಾಗ ಈ ಅವಘಡ ಸಂಭವಿಸಿದ್ದು, ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ರಕ್ಷಣಾ ತಂಡಗಳು ಹಾಗೂ ಸಮೀಪದಲ್ಲಿದ್ದ ಹಡಗಿನಲ್ಲಿದ್ದವರು ಫೆರ‍್ರಿಯಲ್ಲಿದ್ದ ಹಲವರನ್ನು ರಕ್ಷಿಸಿದ್ದಾರೆ. ಇದರಿಂದ ಸಾವು ನೋವಿನ ಸಂಖ್ಯೆ ಕಡಿಮೆಯಾಗಿದೆ. ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಯುತ್ತಿದೆ.

ಫೆರ‍್ರಿ ಪೂರ್ವ ಜಾವಾ ಪ್ರಾಂತ್ಯದ ಸುರಬಯಾದಿಂದ ದಕ್ಷಿಣ ಸುಲವೇಸಿಯ ಮಕಾಸ್ಸರ್‌ಗೆ ತೆರಳುತ್ತಿತ್ತು. ಈ ವೇಳೆ ಅಗ್ನಿ ಅವಘಡ ಸಂಭವಿಸಿದೆ. ಫೆರ‍್ರಿ ಅವಘಡ ನಡೆದ ಮಧುರಾ ದ್ವೀಪವು ಜಾವಾದ ಈಶಾನ್ಯ ಕರಾವಳಿಯಲ್ಲಿದೆ. ಫೆರ‍್ರಿ ದುರಂತಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ.

- Advertisement -

Related news

error: Content is protected !!