Sunday, May 19, 2024
spot_imgspot_img
spot_imgspot_img

ನವವಿವಾಹಿತನೊಬ್ಬ ಪತ್ನಿಯಿಂದ ದೂರವಿರಲು ಮಾಡಿದ್ದ ಮಾಸ್ಟರ್ ಪ್ಲ್ಯಾನ್!

- Advertisement -G L Acharya panikkar
- Advertisement -

ಇಂದೋರ್: ನವವಿವಾಹಿತನೊಬ್ಬ ಪತ್ನಿಯಿಂದ ದೂರವಿರಲು ಕೋವಿಡ್‌ ನಕಲಿ ರಿಪೋರ್ಟ್‌ ತಯಾರಿಸಿ ಇದೀಗ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.

ಮಧ್ಯ ಪ್ರದೇಶದ ಮಹೌ ನಿವಾಸಿ ಇತ್ತೀಚಿಗಷ್ಟೇ ಮದುವೆಯಾಗಿರುವ , 26 ವರ್ಷದ ಉದ್ಯಮಿ ಇಜಾಜ್‌ ಅಹಮ್ಮದ್‌ ಎಂಬಾತ ತನಗೆ ಕರೊನಾ ಪಾಸಿಟಿವ್ ಆಗಿದೆ ಎಂದು ಕೋವಿಡ್ ಪಾಸಿಟಿವ್ ರಿಪೋರ್ಟ್ ಮನೆಗೆ ಕಳುಹಿಸಿದ್ದಾನೆ. ಇದನ್ನು ಆತ ವೆಬ್‌ಸೈಟ್ ಒಂದರಿಂದ ಡೌನ್‌ಲೋಡ್‌ ಮಾಡಿಕೊಂಡು ಅದರಲ್ಲಿ ತನ್ನ ಹೆಸರನ್ನು ಸೇರಿಸಿಕೊಂಡು ನಂತರ ಅದರ ಪ್ರಿಂಟ್‌ಔಟ್‌ ತೆಗೆದು ಅದರ ಫೋಟೋ ಅನ್ನು ತನ್ನ ಪತ್ನಿ ಮತ್ತು ತಂದೆಯ ವಾಟ್ಸ್‌ಆಪ್‌ಗೆ ಕಳುಹಿಸಿದ್ದಾನೆ.

ಕೆಲಸದ ನಿಮಿತ್ತ ಬೇರೆ ಕಡೆ ಹೋಗಿದ್ದ ಆತ ಅದ್ಯಾವುದೋ ಕಾರಣಕ್ಕೆ ಈ ಹೊಸ ಪತ್ನಿಯಿಂದ ದೂರವಿರುವ ತೀರ್ಮಾನ ಮಾಡಿದ್ದಾನೆ. ಅದಕ್ಕಾಗಿ ಕೋವಿಡ್‌ ರಿಪೋರ್ಟ್‌ ಒಳ್ಳೆಯ ಮಾರ್ಗ ಎಂದುಕೊಂಡಿದ್ದು, ನಕಲಿ ರಿಪೋರ್ಟ್‌ ನೋಡಿದ ಕುಟುಂಬಸ್ಥರು ಮೊದಲು ಶಾಕ್‌ ಆಗಿದ್ದಾರೆ. ಆದರೆ ಕೆಲಸದ ನೆಪ ಹೇಳಿ ಆತ ಮನೆ ಬಿಟ್ಟು ಹೋಗಿದ್ದು, ಆರೋಗ್ಯವಂತನಾಗಿಯೇ ಇದ್ದರೂ ಕೋವಿಡ್‌ ವರದಿ ಬಂದಿರುವುದು ಎಲ್ಲವೂ ಗೊಂದಲವಾಗಿ ಕಂಡಿರುವ ಮನೆಯವರಿಗೆ ಯಾವುದೇ ಲಕ್ಷಣ ಇಲ್ಲದಿದ್ದರೂ ಇದು ಹೇಗೆ ಸಾಧ್ಯವಾಯಿತು ಎಂದುಕೊಂಡ ಪತ್ನಿ ಹಾಗೂ ಪಾಲಕರು, ನಂತರ ಆ ವರದಿಯಲ್ಲಿರುವ ಪ್ರಯೋಗಾಲಯಕ್ಕೆ ಕರೆ ಮಾಡಿ ವಿಷಯ ಸಂಗ್ರಹಿಸಿದ್ದಾರೆ. ಅಲ್ಲಿ ಈ ಹೆಸರಿನ ಯಾರಿಗೂ ವರದಿ ನೀಡಲಿಲ್ಲ ಎಂಬ ಮಾಹಿತಿ ಬಂದಿದೆ.

ಈತನ ಮೋಸದಾಟ ಬಯಲಾಗುತ್ತಿದ್ದಂತೆ ಆಸ್ಪತ್ರೆಯ ಪ್ರಯೋಗಾಲಯದವರು ಈತನ ವಿರುದ್ಧ ನಕಲಿ ವರದಿ ತಯಾರಿ ಮಾಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಛೋಟಿ ಗ್ವಾಲ್‍ಟೋಲಿ ಪೊಲೀಸ್ ಠಾಣೆಯಲ್ಲಿ ಇಜಾಜ್‌ ವಿರುದ್ಧ ನಕಲಿ ರಿಪೋರ್ಟ್‌ ತಯಾರಿಕೆಗೆ ಸಂಬಂಧಿಸಿದಂತೆ ದೂರು ದಾಖಲು ಮಾಡಲಾಗಿದೆ. ಅನ್ಯ ಕೆಲಸವನ್ನು ನಿರಾತಂಕ ಮಾಡಿಕೊಂಡಿರುವ ಇಜಾಜ್‌ ಎಲ್ಲಿದ್ದಾನೆ ಎಂದು ಪತ್ತೆಹಚ್ಚುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ.

- Advertisement -

Related news

error: Content is protected !!