Friday, May 3, 2024
spot_imgspot_img
spot_imgspot_img

‘ಬಿಕ್ಕಳಿಕೆ’ ಸಮಸ್ಯೆಯಿಂದ ಸಾಕಾಗಿದೆಯಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

- Advertisement -G L Acharya panikkar
- Advertisement -

ಬಿಕ್ಕಳಿಕೆಯು ಒಮ್ಮೊಮ್ಮೆ ಅತಿ ಕೆಟ್ಟದಾಗಿ ಪರಿಣಮಿಸಬಹುದು. ಡಯಾಫ್ರಾಮ್ ಸ್ನಾಯುಗಳು ಕೆಲ ಕಾಲ ಅನುದ್ದಿಷ್ಟವಾಗಿ ಕುಗ್ಗುವುದರಿಂದ ಹಲವು ಬಾರಿ ಅದನ್ನು ನಿವಾರಣೆ ಮಾಡುವುದೇ ಕಷ್ಟವಾಗುತ್ತೆ. ಬಿಕ್ಕಳಿಕೆ ತಡೆಗಟ್ಟುವ ಮಾರ್ಗಗಳ ಬಗ್ಗೆ ಇಲ್ಲಿದೆ ಮಾಹಿತಿ.

ಒಂದು ಚಮಚ ಸಕ್ಕರೆ ತಕ್ಷಣಕ್ಕೆ ಬಿಕ್ಕಳಿಕೆ ನಿಲ್ಲಿಸಬೇಕೆಂದರೆ ಒಂದು ಚಮಚ ಸಕ್ಕರೆ ತಿನ್ನಬೇಕು. ಬಿಕ್ಕಳಿಕೆಯನ್ನು ತಕ್ಷಣವೇ ನಿಲ್ಲಿಸಲು ಮತ್ತೊಂದು ಹಳೆಯ ಹಾಗೂ ಉತ್ತಮ ಪರಿಹಾರವೆಂದರೆ ಆಳವಾಗಿ ಉಸಿರಾಡುವುದು.

ಒಂದು ಲೋಟ ತುಂಬ ನೀರು ಕುಡಿಯಿರಿ. ಇನ್ನು, ನೀರು ಕುಡಿಯುವಾಗ ಬೇರೆ ಏನನ್ನೋ ಯೋಚಿಸುತ್ತಿರಬೇಕು. ಹೀಗಾಗಿ, ಇದೂ ಕೂಡ ಬಿಕ್ಕಳಿಕೆ ನಿಲ್ಲಿಸಲು ಪ್ರಮುಖ ವಿಧಾನವಾಗಿದೆ.

ಬಿಕ್ಕಳಿಕೆಯಿಂದ ಬಳಲುತ್ತಿರುವ ವ್ಯಕ್ತಿಯನ್ನು ಹೆದರಿಸಿದರೆ ಅವನ ಅಥವಾ ಅವಳ ಗಮನ ಬೇರೆ ಕಡೆಗೆ ಕೇಂದ್ರೀಕರಿಸುತ್ತದೆ ಹಾಗೂ ವಿನೇಗರ್ ಅಥವಾ ನಿಂಬೆ ಹಣ್ಣನ್ನು ತಿನ್ನಬಹುದು. ಇದರಿಂದಾಗಿ ಉಸಿರಾಟಕ್ಕೆ ಅಡಚಣೆಯುಂಟಾಗಲಿದ್ದು, ಬಿಕ್ಕಳಿಕೆ ಇದರಿಂದಾಗಿ ಕ್ರಮೇಣವಾಗಿ ನಿಲ್ಲುತ್ತದೆ.

- Advertisement -

Related news

error: Content is protected !!