- Advertisement -
- Advertisement -



ಬೆಳ್ತಂಗಡಿ:ಇನೋವಾ ಕಾರೊಂದು ಎರಡು ಪೊಲೀಸ್ ವಾಹನಗಳಿಗೆ ಡಿಕ್ಕಿ ಹೊಡೆದು ಪೊಲೀಸ್ ವ್ಯಾನ್ ಪಲ್ಟಿಯಾಧ ಘಟನೆ ನಿಡ್ಲೆ ಸಮೀಪದ ಪಾರ್ಪಿಕಲ್ ಎಂಬಲ್ಲಿ ನಡೆದಿದೆ.
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಆಗಮಿಸಿ ಹಿಂತಿರುಗಿ ಪ್ರಯಾಣಿಸುತ್ತಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎರಡು ಟೆಂಪೋ ಟ್ರಾವೆಲ್ ಗೆ ಹಾಸನದಿಂದ ಧರ್ಮಸ್ಥಳದ ಕಡೆಗೆ ಬರುತ್ತಿದ್ದ ಇನೋವಾ ಕಾರು ಡಿಕ್ಕಿಯಾಗಿದ್ದು, ಘಟನೆಯಲ್ಲಿ ಪೋಲಿಸ್ ಟೆಂಪೋ ಟ್ರಾವೆಲ್ ವಾಹನ ಪಲ್ಟಿಯಾಗಿದೆ. ಕಾರುನಲ್ಲಿ ಮೂರು ಜನ ಪ್ರಯಾಣಿಸುತ್ತಿದ್ದು ಈ ಪೈಕಿ ಕಾರು ಚಾಲಕ ರಾಮೇಗೌಡ ಗಾಯಗೊಂಡ ಘಟನೆ ನಡೆದಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -