Wednesday, July 22, 2026
spot_imgspot_img
spot_imgspot_img

ಇನ್‌ಸ್ಟಾಗ್ರಾಂನಲ್ಲಿ ಹೊಸ ನಿಯಮ: ಇನ್ನು ಮುಂದೆ ಪ್ರತಿ ಪೋಸ್ಟ್‌ಗೆ ಐದು ಹ್ಯಾಶ್‌ಟ್ಯಾಗ್‌ಗಳಷ್ಟೇ ಅನುಮತಿ

- Advertisement -
- Advertisement -

ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಮಹತ್ವದ ಬದಲಾವಣೆಯೊಂದನ್ನು ಘೋಷಿಸಿದೆ. ಇನ್ನು ಮುಂದೆ ಇನ್‌ಸ್ಟಾಗ್ರಾಂನಲ್ಲಿ ಹಾಕುವ ಪ್ರತಿಯೊಂದು ಪೋಸ್ಟ್ ಅಥವಾ ರೀಲ್‌ಗೆ ಗರಿಷ್ಠ ಐದು ಹ್ಯಾಶ್‌ಟ್ಯಾಗ್‌ಗಳನ್ನು ಮಾತ್ರ ಬಳಸಲು ಅವಕಾಶ ನೀಡಲಾಗಿದೆ. ಅಪ್ರಸ್ತುತ ಹಾಗೂ ವಿಷಯಕ್ಕೆ ಸಂಬಂಧಿಸದ ಹ್ಯಾಶ್‌ಟ್ಯಾಗ್ ಬಳಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.


ಮೆಟಾ ಮಾಲೀಕತ್ವದ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ, ಹ್ಯಾಶ್‌ಟ್ಯಾಗ್‌ಗಳನ್ನು ಫಾಲೋ ಮಾಡುವ ಆಯ್ಕೆಯನ್ನು ಇತ್ತೀಚೆಗೆ ತೆಗೆದು ಹಾಕಿದ ಬೆನ್ನಲ್ಲೇ ಈ ಹೊಸ ನಿಯಮ ಜಾರಿಗೆ ತಂದಿದೆ. ಇನ್‌ಸ್ಟಾಗ್ರಾಂ ಮುಖ್ಯಸ್ಥ ಆಡಂ ಮೊಸೆರಿ ಹಾಗೂ ಅಧಿಕೃತ @creators ಖಾತೆಯ ಪ್ರಕಾರ, ವಿಷಯಕ್ಕೆ ನೇರವಾಗಿ ಸಂಬಂಧಿಸಿದ ಕಡಿಮೆ ಹ್ಯಾಶ್‌ಟ್ಯಾಗ್‌ಗಳು ಪೋಸ್ಟ್‌ಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತವೆ.
ಸಾಮಾನ್ಯವಾಗಿ ಬಳಸುವ #reels, #explore ಮುಂತಾದ ಹ್ಯಾಶ್‌ಟ್ಯಾಗ್‌ಗಳು ಜನಪ್ರಿಯತೆ ಹೆಚ್ಚಿಸಲು ಹೆಚ್ಚಿನ ಸಹಾಯ ಮಾಡುವುದಿಲ್ಲ ಮತ್ತು ಕೆಲವೊಮ್ಮೆ ನಕಾರಾತ್ಮಕ ಪರಿಣಾಮವೂ ಬೀರುವ ಸಾಧ್ಯತೆ ಇದೆ ಎಂದು ಇನ್‌ಸ್ಟಾಗ್ರಾಂ ಸ್ಪಷ್ಟಪಡಿಸಿದೆ. ಕಂಟೆಂಟ್ ಕ್ರಿಯೇಟರ್‌ಗಳು ಹ್ಯಾಶ್‌ಟ್ಯಾಗ್‌ಗಳಿಗಿಂತ ಉತ್ತಮ ವಿಷಯ ನಿರ್ಮಾಣ ಮತ್ತು ತಮ್ಮದೇ ವೀಕ್ಷಕರ ವಲಯವನ್ನು ಬೆಳೆಸುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದೆ.

- Advertisement -

Related news

error: Content is protected !!