Friday, April 19, 2024
spot_imgspot_img
spot_imgspot_img

ಸ್ವಸ್ತಿಕ್‌ ಕಲೋತ್ಸವ 2024 ಕಾರ್ಯಕ್ರಮದಲ್ಲಿ ಕ್ರೀಡಾಭಿಮಾನಿಗಳ ಮನಗೆದ್ದ ಅಂತರ್‌ ರಾಜ್ಯ ಕಬಡ್ಡಿ ಪಂದ್ಯಾಟ

- Advertisement -G L Acharya panikkar
- Advertisement -

ನರೇಂದ್ರ ಟ್ರೋಫಿ ಹಾಗೂ 50,000/-ನಗದಿನೊಂದಿಗೆ ವಿನ್ನರ್ಸ್ ಆಗಿ ಮಿಂಚಿದ ಚಂದಳಿಕೆಯ ’ಭಾರತ್‌ ಅಡಿಟೋರಿಯಂ’ ತಂಡ

ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಸಾರಥ್ಯದಲ್ಲಿ ಸ್ವಸ್ತಿಕ್‌ ಕಲೋತ್ಸವ 2024 ಅದ್ದೂರಿ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್‌ ಕಬಡ್ಡಿ ಅಸೋಸಿಯೇಷನ್‌ (ರಿ) ಸಹಕಾರದೊಂದಿಗೆ ಪ್ರೋ ಮಾದರಿಯ ಪುರುಷರ ಮತ್ತು ಮಹಿಳೆಯರ ಹೊನಲು ಬೆಳಕಿನ ಅಂತರ್‌ ರಾಜ್ಯ ಮುಕ್ತ ಕಬಡ್ಡಿ ಪಂದ್ಯಾಟ ನರೇಂದ್ರ ಟ್ರೋಫಿ- 2024 ಕ್ಯಾಪ್ಟನ್ ಪ್ರಾಂಜಲ್‌ ಕ್ರೀಡಾಂಗಣದಲ್ಲಿ ನಡೆಯಿತು.

ಮಹಿಳೆಯರ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜು ತಂಡ ಪ್ರಥಮ ಸ್ಥಾನ ಪಡೆದು10,000/- ನಗದು ಹಾಗೂ ನರೇಂದ್ರ ಟ್ರೋಫಿಯೊಂದಿಗೆ ವಿನ್ನರ್ಸ್ ಆಗಿ ಮಿಂಚಿದ್ದಾರೆ. ಭಾರತ್ ಆಡಿಟೋರಿಯಂ ಚಂದಳಿಕೆ ತಂಡ ದ್ವಿತೀಯ ಸ್ಥಾನ ಪಡೆದು 7,000/- ನಗದು ಹಾಗೂ ನರೇಂದ್ರ ಟ್ರೋಫಿಯೊಂದಿಗೆ ರನ್ನರ್ಸ್ ಆಗಿ ಹೊರಹೊಮ್ಮಿದ್ದಾರೆ. ತೃತೀಯ ಸ್ಥಾನ ಶ್ರೀ ಶಾರದಾಂಬಾ ಭಜನಾ ಮಂಡಳಿ ಅಳಕೆಮಜಲು ಹಾಗೂ ಚತುರ್ಥ ಸ್ಥಾನವನ್ನು ಎಸ್‌ಡಿಎಂ ಉಜಿರೆ ತಂಡ ಪಡೆದುಕೊಂಡಿದೆ.

ಪುರುಷರ ವಿಭಾಗದ ಅಂತ್‌ ರಾಜ್ಯ ಕಬಡ್ಡಿ ಪಂದ್ಯಾಟದಲ್ಲಿ ಭಾರತ್‌ ಅಡಿಟೋರಿಯಂ ಚಂದಳಿಕೆ ಪ್ರಥಮ ಸ್ಥಾನದೊಂದಿದೆ 50,000 ನಗದು ಹಾಗೂ ನರೇಂದ್ರ ಟ್ರೋಫಿಯೊಂದಿಗೆ ವಿನ್ನರ್ಸ್‌ ಆಗಿ ಹೊರಹೊಮ್ಮಿದ್ದಾರೆ.
ಸಾಯಿ ಟೌನ್ ಕಿಚನ್‌ ತಂಡ ದ್ವಿತೀಯ ಸ್ಥಾನದೊಂದಿಗೆ 30,000 ನಗದು ಹಾಗೂ ನರೇಂದ್ರ ಟ್ರೋಫಿಯೊಂದಿಗೆ ರನ್ನರ್ಸ್‌ ಆಗಿ ಮುಂಚಿದ್ದಾರೆ. ತೃತೀಯ ಸ್ಥಾನವನ್ನು ಎನ್‌ಎಂಸಿ ಸುಳ್ಯ ಹಾಗೂ ತೃತೀಯ ಸ್ಥಾನವನ್ನು ಉಮಾಮಹೇಶ್ವರಿ ಕಾಪಿಕಾಡ್‌ ತಂಡ ಪಡೆದುಕೊಂಡಿದೆ. ಬೆಸ್ಟ್‌ ಆಲ್‌ ರೌಂಡರ್‍ ದರ್ಶನ್‌, ಬೆಸ್ಟ್ ಡಿಫೆಂರ್‌ ಶಿಹಾಸ್‌ ಶರೀಫ್‌, ಬೆಸ್ಟ್‌ ರೈಡರ್‌ ರಶೀದ್‌ ಬನಾರಿಯವರು ಆಯ್ಕೆಯಾಗಿ ಬಹುಮಾನ ಪಡೆದುಕೊಂಡರು

- Advertisement -

Related news

error: Content is protected !!