Monday, May 6, 2024
spot_imgspot_img
spot_imgspot_img

ಸಿಎಂ ಸಿದ್ದರಾಮಯ್ಯನವರಿಗೆ ಹಾಗೂ ಅಶ್ವಿನಿ ಪುನೀತ್ ರಾಜ್ ಕುಮಾರ್ ವರಿಗೆ ಬೆಂಗಳೂರು ಕಂಬಳದ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದ ಶಾಸಕ ಅಶೋಕ್ ಕುಮಾರ್ ರೈ

- Advertisement -G L Acharya panikkar
- Advertisement -

ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್ ಭಾಗಿ

ಪುತ್ತೂರು: ನವೆಂಬ‌ರ್ 25ಮತ್ತು 26 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಐತಿಹಾಸಿಕ ಬೆಂಗಳೂರು ಕಂಬಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಖ್ಯಾತ ಸಿನಿಮಾ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ರವರಿಗೆ ಕಂಬಳ ಸಮಿತಿ ಅಧ್ಯಕ್ಷರೂ ಪುತ್ತೂರು ಶಾಸಕರೂ ಆದ ಅಶೋಕ್ ರೈ ಯವರು ಆಮಂತ್ರಣ ಪತ್ರ ನೀಡಿ ಕಂಬಳಕ್ಕೆ ಆಹ್ವಾನ ನೀಡಿದರು.

25 ರಂದು ಸಂಜೆ ನಡೆಯುವ ಮುಖ್ಯ ಸಭಾ ಕಾರ್ಯಕ್ರಮವನ್ನು ಸಿದ್ದರಾಮಯ್ಯರವರು ಉದ್ಘಾಟನೆ ಮಾಡಲಿದ್ದಾರೆ ಹಾಗೂ ಕಂಬಳ ಕರೆಯನ್ನು ಖ್ಯಾತ ಸಿನಿಮಾ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಉದ್ಘಾಟಿಸಲಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಐತಿಹಾಸಿಕ ಕಂಬಳದ ಬಗ್ಗೆ ಅಶೋಕ್ ರೈ ಯವರು ಮುಖ್ಯಮಂತ್ರಿಗಳಿಗೆ ವಿವರಿಸಿದರು. ಕಂಬಳಕ್ಕೆ ಬರುವ ಅತಿಥಿಗಳು ಭಾಗವಹಿಸುವ ಲಕ್ಷಾಂತರ ಕಂಬಳಾಭಿಮಾನಿಗಳ ಬಗ್ಗೆಯೂ ಸಿಎಂ ಅವರಿಗೆ ವಿವರಣೆ ನೀಡಿದರು.

ಕರ್ನಾಟಕದ ಇತಿಹಾಸದಲ್ಲೇ ರಾಜ್ಯದ ರಾಜಧಾನಿಯಲ್ಲಿ ತುಳುನಾಡಿನ ಕಂಬಳ ಕ್ರೀಡೆಯನ್ನು ಆಯೋಜನೆ ಮಾಡಿರುವ ಬಗ್ಗೆ ಶಾಸಕರಾದ ಅಶೋಕ್ ರೈ ಯವರನ್ನು ಇದೇ ಸಂದರ್ಭದಲ್ಲಿ ಸಿಎಂ ರವರು ಅಭಿನಂದಿಸಿದರು. ಕಂಬಳಕ್ಕೆ ಬರಲು ನಾನು ರೆಡಿಯಾಗಿದ್ದೇನೆ, ನನಗೆ ಕಂಬಳವನ್ನು ವೀಕ್ಷಿಸಬೇಕು, ಕರಾವಳಿ ಭಾಗದ ಸುಪ್ರಸಿದ್ದ ಜನಪದ ಕ್ರೀಡೆಯನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡುವ ಮೂಲಕ ರಾಜ್ಯದ ಎಲ್ಲಾ ಜನರಿಗೂ, ರಾಜಧಾನಿಯಲ್ಲಿರುವ ದೇಶದ ನಾನಾ ರಾಜ್ಯದ ಜನತೆಗೂ, ವಿದೇಶಿ ಪ್ರವಾಸಿಗರಿಗೂ ಕಂಬಳದ ಸವಿಯನ್ನು ಅನುಭವಿಸುವ ಯೋಗ ದೊರಕಿದೆ ಇದಕ್ಕಾಗಿ ಅಭಿನಂದಿಸುವುದಾಗಿ ಸಿಎಂ ರವರು ಶಾಸಕರಿಗೆ ತಿಳಿಸಿದರು. ಕಂಬಳಕ್ಕೆ ಸರಕಾರದ ಪೂರ್ಣಪ್ರಮಾಣದ ಬೆಂಬಲವನ್ನು ಇದೇ ಸಂದರ್ಭದಲ್ಲಿ ಸಿಎಂ ರವರು ಘೋಷಿಸಿದರು.

- Advertisement -

Related news

error: Content is protected !!