Sunday, May 5, 2024
spot_imgspot_img
spot_imgspot_img

IPL 2021: ರಾಜಸ್ಥಾನ್​​ ರಾಯಲ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​​ಗೆ 33 ರನ್​​ಗಳ ಭರ್ಜರಿ ಜಯ

- Advertisement -G L Acharya panikkar
- Advertisement -
driving

ಟಾಸ್ ಸೋತರೂ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​​ ರಾಜಸ್ಥಾನ ರಾಯಲ್ಸ್​ ವಿರುದ್ಧ 33 ರನ್​​ಗಳ ಭರ್ಜರಿ ಜಯ ಸಾಧಿಸಿದೆ. ಡೆಲ್ಲಿ ಕ್ಯಾಪಿಟಲ್ಸ್​​ ರಾಜಸ್ಥಾನ ರಾಯಲ್ಸ್​ ತಂಡಕ್ಕೆ 6 ವಿಕೆಟ್ ಕಳೆದುಕೊಂಡು 155 ರನ್​​ಗಳ ಟಾರ್ಗೆಟ್​ ನೀಡಿತ್ತು. ಈ ರನ್​​ಗಳ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್​​​ 6 ವಿಕೆಟ್​​ ನಷ್ಟಕ್ಕೆ 20 ಓವರ್​​ಗಳಲ್ಲಿ 121 ರನ್​ ಮಾತ್ರ​ ಪೇರಿಸಿತು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ರಾಜಸ್ಥಾನ ಹೀನಾಯ ಸೋಲು ಅನುಭವಿಸಿತು.

ಡೆಲ್ಲಿ ಕ್ಯಾಪಿಟಲ್ಸ್ ಪರ ಮೊದಲು ಬ್ಯಾಟಿಂಗ್​​ ಮಾಡಿದ ಪೃಥ್ವಿ ಶಾ 10, ಶಿಖರ್ ಧವನ್ 8 ರನ್​​ ಗಳಿಸಿದರು. ನಂತರ ಕ್ರೀಸ್​​ಗೆ ಬಂದ ಶ್ರೇಯಸ್ ಐಯ್ಯರ್ 43 ರನ್​​ ಗಳಿಸುವ ಮೂಲಕ ತಂಡ ಬೃಹತ್​​ ಮೊತ್ತ ಪೇರಿಸಲು ನೆರವಾದರು. ರಿಷಭ್ ಪಂತ್ 24, ಶಿಮ್ರನ್ ಹೆಟ್ಮೈರ್ 28, ಲಲಿತ್ ಯಾದವ್ 14, ಅಕ್ಷರ್ ಪಟೇಲ್ 12, ರವಿಚಂದ್ರನ್ ಅಶ್ವಿನ್ 6 ರನ್ ಸೇರಿಸಿದರು. ಈ ಮೂಲಕ 154 ರನ್​​ ಗಳಿಸಿದರು.

ರಾಜಸ್ಥಾನ ರಾಯಲ್ಸ್​ ತಂಡದ ಪರ ಸಂಜು ಸ್ಯಾಮ್ಸನ್​ ಔಟಾಗದೆ 70 ರನ್, ಮಹೀಪಾಲ್​​ 19 ರನ್​​ ಗಳಿಸಿದರು.

- Advertisement -

Related news

error: Content is protected !!