
ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ 35ನೇ ಪಂದ್ಯ ಶಾರ್ಜಾದ ಮೈದಾನದಲ್ಲಿ ನಡೆಯಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಚೆನ್ನೈಗೆ 157 ರನ್ಗಳ ಗುರಿ ನೀಡಿತು. ಆರ್ಸಿಬಿ ನೀಡಿದ ರನ್ಗಳ ಟಾರ್ಗೆಟ್ ಬೆನ್ನತ್ತಿದ ಚೆನ್ನೈ ಕೇವಲ 18.1 ಓವರ್ಗಳಲ್ಲಿ 157 ರನ್ ಗಳಿಸುವ ಮೂಲಕ ಭರ್ಜರಿ ಜಯ ಸಾಧಿಸಿದೆ.

ಮೊದಲು ಉತ್ತಮ ಇನ್ನಿಂಗ್ಸ್ ಆರಂಭಿಸಿದ ರುತುರಾಜ್ ಗಾಯಕ್ವಡ್ ಮತ್ತು ಫ್ಯಾಫ್ ಡುಪ್ಲೆಸಿಸ್ 59 ರನ್ಗಳ ಜತೆಯಾಟ ಆಡಿದರು. ಚಹಲ್ ಎಸೆತದಲ್ಲಿ ಸಿಕ್ಸ್ ಹೊಡೆಯಲು ಹೋದ ರಿತುರಾಜ್ ಗಾಯಕ್ವಾಡ್ ವಿರಾಟ್ ಕೊಹ್ಲಿಗೆ ಅಚ್ಚರಿಯ ಕ್ಯಾಚ್ ನೀಡಿದರು. ನಂತರ ಡುಪ್ಲೆಸಿಸ್ ಔಟಾದರು. ನಂತರ ಕ್ರೀಸ್ಗೆ ಬಂದ ಮೊಯೀನ್ ಅಲಿ 18 ಬಾಲ್ಗಳಲ್ಲಿ 23 ರನ್ ಹೊಡೆದು ವಿಕೆಟ್ ಒಪ್ಪಿಸಿದರು. ಬಳಿಕ ಫೀಲ್ಡಿಗೆ ಬಂದ ಎಂ.ಎಸ್ ಧೋನಿ ಮತ್ತು ರೈನಾ ಚೆನ್ನೈ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇನ್ನು, ಆರ್ಸಿಬಿ ಪರ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಮತ್ತು ನಾಯಕ ವಿರಾಟ್ ಕೊಹ್ಲಿ 111 ರನ್ಗಳ ಜೊತೆಯಾಟದೊಂದಿಗೆ ಭರ್ಜರಿ ಆಟ ಆಡಿದರು. ಆದರೆ, ಕೊನೆಯ 7 ಓವರ್ಗಳಲ್ಲಿ ಮಾತ್ರ ವಿರಾಟ್ ಕೊಹ್ಲಿ ನಂತರ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡ ಆರ್ಸಿಬಿ 156 ರನ್ ಪೇರಿಸಿತು.

ಕೊಹ್ಲಿ 53(41), ದೇವದತ್ ಪಡಿಕ್ಕಲ್ 70(50), ಎಬಿ ಡಿವಿಲಿಯರ್ಸ್ 12(11), ಮ್ಯಾಕ್ಸ್ವೆಲ್ 11(9) ರನ್ ಗಳಿಸಿದರು. ಡ್ವೇನ್ ಬ್ರಾವೊ ಮತ್ತು ಶಾರ್ದೂಲ್ ಠಾಕೂರ್ ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿದ ಕಾರಣ 200 ರನ್ ದಾಟಬೇಕಿದ್ದ ಆರ್ಸಿಬಿ 6 ವಿಕೆಟ್ ನಷ್ಟಕ್ಕೆ ಕೇವಲ 156 ಗಳಿಸಿತು.











