Saturday, May 15, 2021
spot_imgspot_img
spot_imgspot_img

ಐಪಿಎಲ್​ 2021: ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ 4 ರನ್​​ಗಳ ರೋಚಕ ಗೆಲುವು ಪಡೆದ ಪಂಜಾಬ್ ಕಿಂಗ್ಸ್

- Advertisement -
- Advertisement -

ಮುಂಬೈ: ಐಪಿಎಲ್​ 2021ರ ಆವೃತ್ತಿಯಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಪಂಜಾಬ್ ಕಿಂಗ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 4 ರನ್​​ಗಳ ರೋಚಕ ಗೆಲುವು ಪಡೆದು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ರಾಜಸ್ಥಾನ ರಾಯಲ್ಸ್ ತಂಡದ ನಾಯಕತ್ವ ವಹಿಸಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ಸಂಜು ಸ್ಯಾಮ್ಸನ್​ ಕೊನೆಯ ಎಸೆತದವರೆಗೂ ತಂಡಕ್ಕೆ ಗೆಲುವು ತಂದು ಕೊಡಲು ಹೋರಾಟ ನಡೆಸಿ ವಿಫಲರಾದರು.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 221 ರನ್​ ಗಳಿಸಿ 222 ರನ್​ಗಳ ಬೃಹತ್ ರನ್ ಗುರಿಯನ್ನು ನೀಡಿತ್ತು. 222 ರನ್ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 217 ರನ್​ ಗಳಿಸಿ ಸೋಲೋಪ್ಪಿಕೊಂಡಿತು. ಪ್ರಾರಂಭದಲ್ಲಿ ಪ್ರಮುಖ ಕ್ಯಾಚ್​​ಗಳನ್ನು ಕೈಚೆಲ್ಲಿದರೂ ಅಂತಿಮವಾಗಿ ಪಂಜಾಬ್ ಗೆಲುವು ಪಡೆಯಲು ಯಶಸ್ವಿಯಾಯಿತು.

ರಾಜಸ್ಥಾನ ಪರ ನಾಯಕ ಸಂಜು ಸ್ಯಾಮ್ಸನ್​ 63 ಎಸೆತಗಳಲ್ಲಿ 119 ರನ್ ಗಳಿಸಿ ಇನ್ನಿಂಗ್ಸ್​ನ ಅಂತಿಮ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಉಳಿದಂತೆ ಬಟ್ಲರ್ 25 ರನ್​​, ದುಬೆ 23 ರನ್​, ಪ್ರಯಾಗ್ 25 ರನ್ ಗಳಿಸಿದರು. ಪಂಜಾಬ್ ಪರ ನಾಯಕ ಕೆ.ಎಲ್​ ರಾಹುಲ್ 91 ರನ್, ದೀಪಕ್ ಹೂಡಾ 64 ರನ್, ಗೇಲ್ 40 ಹಾಗೂ ಮಯಾಂಕ್ 14 ರನ್ ಗಳಿಸಿದರು.

- Advertisement -
- Advertisement -

MOST POPULAR

HOT NEWS

Related news

error: Content is protected !!