Friday, April 19, 2024
spot_imgspot_img
spot_imgspot_img

ಐಪಿಎಲ್ 2021: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 6 ವಿಕೆಟ್‌ಗಳ ಜಯ

- Advertisement -G L Acharya panikkar
- Advertisement -

ಮುಂಬೈ: ಐಪಿಎಲ್ ಟೂರ್ನಿಯ 18ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 6 ವಿಕೆಟ್‌ಗಳ ಸುಲಭ ಜಯ ದಾಖಲಿಸಿದೆ.

ರಾಜಸ್ಥಾನ್ ಪರ ನಾಯಕ ಸಂಜು ಸ್ಯಾಮ್ಸನ್ ಔಟಾಗದೆ 41 ಬಾಲ್‌ಗೆ 42, ಮಿಲ್ಲರ್ ಔಟಾಗದೆ 24 ರನ್ ಕಲೆಹಾಕಿದ್ದಾರೆ. ಶಿವಂ ದುಬೆ ಹಾಗೂ ಜೈಸ್ವಾಲ್ ತಲಾ 22 ರನ್ ದಾಖಲಿಸಿ ತಂಡಕ್ಕೆ ನೆರವಾಗಿದ್ದಾರೆ. ಕೋಲ್ಕತ್ತಾ ಪರ ವರುಣ್ ಚಕ್ರವರ್ತಿ 2 ವಿಕೆಟ್ ಪಡೆದಿದ್ದಾರೆ. ಶಿವಂ ಮಾವಿ ಹಾಗೂ ಸುನಿಲ್‌ ನರೈನ್ ರನ್ ನಿಯಂತ್ರಿಸಿದ್ದಾರೆ. ಆದರೂ ಪಂದ್ಯ ಗೆಲ್ಲಲು ಕೋಲ್ಕತ್ತಾ ವಿಫಲವಾಗಿದೆ.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗೆ 9 ವಿಕೆಟ್ ಕಳೆದುಕೊಂಡು 133 ರನ್ ದಾಖಲಿಸಿತ್ತು. ಈ ಮೂಲಕ ರಾಜಸ್ಥಾನ್ ರಾಯಲ್ಸ್‌ಗೆ ಗೆಲ್ಲಲು 134 ರನ್ ಗುರಿ‌ ನೀಡಿತ್ತು. ಕೋಲ್ಕತ್ತಾ ಪರ ನಿತೀಶ್ ರಾಣಾ 22, ರಾಹುಲ್ ತ್ರಿಪಾಠಿ 36 ಹಾಗೂ ದಿನೇಶ್ ಕಾರ್ತಿಕ್ 25 ರನ್ ಗಳಿಸಿದ್ದರು. ಉಳಿದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಒಂದಂಕಿ ದಾಟಲು ಪರದಾಡಿದ್ದರು.

ರಾಜಸ್ಥಾನ್ ರಾಯಲ್ಸ್ ಪರ ಕ್ರಿಸ್ ಮಾರಿಸ್ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ್ದರು. 4 ಓವರ್‌ಗೆ 23 ರನ್‌ ನೀಡಿ 4 ವಿಕೆಟ್ ಕಬಳಿಸಿದ್ದರು. ಸಕರಿಯಾ, ಉನಾದ್ಕತ್ ಹಾಗೂ‌ ಮುಸ್ತಫಿಜುರ್ ರಹಮಾನ್ ತಲಾ 1 ವಿಕೆಟ್ ಪಡೆದಿದ್ದರು

- Advertisement -

Related news

error: Content is protected !!