- Advertisement -
- Advertisement -




ದೆಹಲಿ: 2024ರ ಐಪಿಎಲ್ ಆವೃತ್ತಿಯ ಚಾಂಪಿಯನ್ ಕೆಕೆಆರ್ ತಂಡಕ್ಕೆ ಹೊಸಬರ ಎಂಟ್ರಿಯಾಗಿದೆ. ಈ ಮೊದಲು ಕೆಕೆಆರ್ ತಂಡದ ಮೆಂಟರ್ ಆಗಿ ಗೌತಮ್ ಗಂಭೀರ್ ಅವರು ತಂಡವನ್ನು ಮುನ್ನಡೆಸುತ್ತಿದ್ದರು. ಇದೀಗ ಗೌತಮ್ ಗಂಭಿರ್ ಅವರ ಸ್ಥಾನಕ್ಕೆ ಅನುಭವಿ ಆಟಗಾರ ಡ್ವೇನ್ ಬ್ರಾವೋ ಅವರನ್ನು ನೇಮಿಸಲಾಗಿದೆ ಎಂದು ಕೆಕೆಆರ್ ಫ್ರಾಂಚೈಸಿ ತಿಳಿಸಿದೆ.
ಡ್ವೇನ್ ಬ್ರಾವೋ ಅವರು ಇತ್ತೀಚೆಗಷ್ಟೇ ಎಲ್ಲಾ ರೀತಿಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದರು. ಆದರೆ ಇದೀಗ ಬ್ರಾವೋ ಅವರು ಐಪಿಎಲ್ನಲ್ಲಿ ಕೆಕೆಆರ್ ತಂಡದೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಸಿಎಸ್ಕೆಯೊಂದಗಿನ ತಮ್ಮ ನಂಟನ್ನು ಮುರಿದುಕೊಂಡಿದ್ದಾರೆ.
ಕಳೆದ ಆವೃತ್ತಿಯವರೆಗೂ ಬ್ರಾವೋ ಅವರು ಸಿಎಸ್ಕೆ ತಂಡದ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ 2025ರ ಆವೃತ್ತಿಯಿಂದ ಕೆಕೆಆರ್ ತಂಡದಲ್ಲಿ ಗೌತಮ್ ಗಂಭೀರ್ ಮಾಡುತ್ತಿದ್ದ ಕೆಲಸವನ್ನು ಬ್ರಾವೋ ಮುಂದುವರೆಸಲಿದ್ದಾರೆ.
- Advertisement -