Friday, June 19, 2026
spot_imgspot_img
spot_imgspot_img

ಪುತ್ತೂರು: ಮಾಡೂರು ಇಸುಬು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗೆ ಪುಡಿ ರೌಡಿಗಳಿಂದ ಕೊಲೆ ಯತ್ನ; ಪ್ರಕರಣ ದಾಖಲು

- Advertisement -
- Advertisement -

ಆರೋಪಿಗಳಾದ ನರ್ಮೇಶ್ ಮತ್ತು ಪ್ರಸಾದ್‌ನನ್ನು ಬಂಧಿಸಿ ಜೈಲಿಗಟ್ಟಿದ ಪುತ್ತೂರು ನಗರ ಠಾಣಾ ಪೊಲೀಸರು

ಪುತ್ತೂರು: ಬೊಳುವಾರಿನಲ್ಲಿ ಫೆ.12 ರ ತಡ ರಾತ್ರಿ ಮಾತಿನ ಚಕಮಕಿ ನಡೆದು ಪರಸ್ಪರ ಹಲ್ಲೆ ನಡೆಸಿದ್ದು, ಈ ಬಗ್ಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಗಳನ್ನು ನರ್ಮೇಶ್ ಮತ್ತು ಬನ್ನೂರು ನೆಕ್ಕಿಲದ ಪ್ರಸಾದ್ ಎಂದು ಗುರುತಿಸಲಾಗಿದೆ.

ಘಟನೆಗೆ ಸಂಬಂಧಿಸಿ ಹಲ್ಲೆಗೊಳಗಾದ ಟಿಪ್ಪರ್ ಚಾಲಕ ಬಾಲಳಗೋಡು ನಿವಾಸಿ ಉಮೇಶ್ ಅವರು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರು ನೀಡಿದ ದೂರಿನಂತೆ ನರ್ಮೇಶ್ ಮತ್ತು ಬನ್ನೂರು ನೆಕ್ಕಿಲದ ಪ್ರಸಾದ್ ಎಂಬವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಆ ಬಳಿಕ ಆರೋಪಿಗಳನ್ನು ಪೊಲೀಸರು ಬಂಧಿಸಿ ಫೆ.14 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಗಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

Related news

error: Content is protected !!