Friday, June 27, 2025
spot_imgspot_img
spot_imgspot_img

ಐಪಿಎಲ್‌ನಿಂದ ಹರ್ಭಜನ್ ಸಿಂಗ್ ಔಟ್, ಚೆನ್ನೈ ಸೂಪರ್‌ಕಿಂಗ್ಸ್‌ಗೆ ಇನ್ನೊಂದು ಹೊಡೆತ.!

- Advertisement -
- Advertisement -

ಮುಂಬೈ: 2020ರ ಐಪಿಎಲ್ ಆವೃತ್ತಿಯಿಂದ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ವೈಯುಕ್ತಿಕ ಕಾರಣಗಳಿಂದ ಹೊರ ನಡೆದಿದ್ದು,ಚೆನ್ನೈ ಸೂಪರ್‌ಕಿಂಗ್ಸ್‌ಗೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ತಮ್ಮ ನಿರ್ಧಾರವನ್ನು ಶುಕ್ರವಾರ ತಂಡದ ಮ್ಯಾನೇಜ್‍ಮೆಂಟ್‍ಗೆ ತಿಳಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಹರ್ಭಜನ್ ಸಿಂಗ್ 2020ರ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಹೊರ ನಡೆಯುತ್ತಿರುವ 2ನೇ ಆಟಗಾರರಾಗಿದ್ದಾರೆ. ಇದಕ್ಕೂ ಮುನ್ನ ಸುರೇಶ್ ರೈನಾ ಯುಎಇಗೆ ತೆರಳಿ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ ಬಳಿಕ ವಾಪಸ್ ಆಗಿದ್ದರು. ಆದರೆ ಹರ್ಭಜನ್ ಸಿಂಗ್ ತಂಡದೊಂದಿಗೆ ಪ್ರಯಾಣಿಸದೆ ಭಾರತದಲ್ಲೇ ಉಳಿದುಕೊಂಡಿದ್ದರು.ಹರ್ಭಜನ್ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಟೂರ್ನಿಯಿಂದ ಹಿಂದೆ ಸರಿಯುವ ಬಗ್ಗೆ ಹರ್ಭಜನ್ ಸಿಂಗ್ ಶುಕ್ರವಾರ ಸಿಎಸ್‌ಕೆ ತಂಡಕ್ಕೆ ಅಧಿಕೃತ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಈ ಮುನ್ನ ಮುಂಬೈ ಇಂಡಿಯನ್ಸ್ ತಂಡದ ಸದಸ್ಯರಾಗಿದ್ದ ಹರ್ಭಜನ್ ಸಿಂಗ್ ಐಪಿಎಲ್‌ನಲ್ಲಿ ಒಟ್ಟಾರೆ 160 ಪಂದ್ಯಗಳನ್ನು ಆಡಿದ್ದು, 150 ವಿಕೆಟ್ ಕಬಳಿಸಿದ್ದಾರೆ. ಆದರೆ ಇದೀಗ ಅವರ ಗೈರಿನಲ್ಲಿ ಸಿಎಸ್‌ಕೆ ತಂಡ ಮತ್ತೋರ್ವ ಬದಲಿ ಸ್ಪಿನ್ನರ್‌ಗೆ ಹುಡುಕಾಟ ನಡೆಸಬೇಕಾಗಿದೆ.

- Advertisement -

Related news

error: Content is protected !!