Thursday, May 9, 2024
spot_imgspot_img
spot_imgspot_img

ಒಂಟಿ ಅವಿವಾಹಿತ ಮಹಿಳೆಯ ಅತ್ಯಾಚಾರ, ಕೊಲೆ, ಸುಲಿಗೆ ಪ್ರಕರಣ; ಅಪರಾಧಿ ಅಶ್ರಫ್‌ಗೆ ಕಠಿಣ ಜೀವಾವಧಿ ಶಿಕ್ಷೆ

- Advertisement -G L Acharya panikkar
- Advertisement -

ಮನೆಗೆ ಕೂಲಿ ಕೆಲಸಕ್ಕೆ ಬಂದಿದ್ದ ಆ ವ್ಯಕ್ತಿ ಬಾವಿಗೆ ಬಿದ್ದಿದ್ದ ಹೆಬ್ಬಾವು ತೆಗೆಯುವುದಕ್ಕೂ ಸಹಕರಿಸಿದ್ದ. ಒಬ್ಬಂಟಿ ಮಹಿಳೆ, ಮನೆ ತುಂಬಾ ಅಡಿಕೆ ಬೆಳೆ, ಲಕ್ಷಾಂತರ ರೂಪಾಯಿ ಹಣ ಮನೆಯಲ್ಲಿ ಇರಬಹುದು ಎಂದು ಕಳ್ಳತನಕ್ಕೆ ಯೋಜನೆ ಹಾಕಿದ್ದ. ಅದರಂತೆ, ಮನೆಗೆ ನುಗ್ಗಿದ್ದ ಅಶ್ರಫ್ ಕೈಗೆ ಸಿಕ್ಕ ನಗದು ದೋಚಿ 53 ವರ್ಷದ ಅವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕ್ರೌರ್ಯ ಮೆರೆದಿದ್ದ. ಅತ್ಯಾಚಾರ ಎಸಗಿ ಆಕೆಯ ಬಳಿಯಿದ್ದ ಚಿನ್ನದ ಆಭರಣಗಳನ್ನ ದೋಚಿ ಪರಾರಿಯಾಗಿದ್ದ ವ್ಯಕ್ತಿಗೆ ಜಿಲ್ಲಾ ಸತ್ರ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ.

ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದಲ್ಲಿ ಒಬ್ಬಂಟಿ ಅವಿವಾಹಿತ 53 ವರ್ಷ ಪ್ರಾಯದ ಮಹಿಳೆಯ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗೆ ಜಿಲ್ಲಾ ಸತ್ರ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ. ಅಪರಾಧಿಯನ್ನು ಕಾಸರಗೋಡು ಜಿಲ್ಲೆಯ ಗಡಿಭಾಗದ ಪಾತೂರು ನಿವಾಸಿ ಕೂಲಿ ಕಾರ್ಮಿಕ ಅಶ್ರಫ್ ಎಂದು ಗುರುತಿಸಲಾಗಿದೆ.

2020ನೇ ಸೆಪ್ಟೆಂಬರ್ 24 ರಂದು ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಕಣಂತೂರು, ಬೆಳ್ಳೇರಿ ಎಂಬಲ್ಲಿ ಒಂಟಿಯಾಗಿ ವಾಸವಿದ್ದ 53 ವರ್ಷದ ಅವಿವಾಹಿತ ಮಹಿಳೆ ಕುಸುಮಾ ತನ್ನದೇ ಮನೆಯಲ್ಲಿ ನಗ್ನಸ್ಥಿತಿಯಲ್ಲಿ ಕೊಲೆಯಾದ ರೀತಿ ಕಂಡುಬಂದಿದ್ದರು. ನೆರೆ ಮನೆಯವರಿಂದ ಕುಸುಮಾ ಸಾವಿನ ವಿಚಾರ ಬೆಳಕಿಗೆ ಬಂದಿತ್ತು. ಕೊಣಾಜೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು ಕೆಲವೇ ದಿನಗಳಲ್ಲಿ ಒಂಟಿ ಮಹಿಳೆಯ ಅತ್ಯಾಚಾರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದರು. ಆರೋಪಿ, ಕಾಸರಗೋಡು ಜಿಲ್ಲೆಯ ಗಡಿಭಾಗದ ಪಾತೂರು ನಿವಾಸಿ ಕೂಲಿ ಕಾರ್ಮಿಕನಾಗಿದ್ದ ಅಶ್ರಫ್ ನನ್ನು ಬಂಧಿಸಿದ್ದರು.

ಆರೋಪಿ ಅಶ್ರಫ್ ಒಂಟಿ ಮಹಿಳೆಯ ಮನೆಗೆ ನುಗ್ಗಿ ಮಹಿಳೆಯ ಮೇಲೆ ಅತ್ಯಾಚಾರಗೈದು, ಆಕೆಯ ಕಿವಿ ಓಲೆ ಮತ್ತು ಮನೆಯಲ್ಲಿದ್ದ 15 ಸಾವಿರ ನಗದನ್ನು ಕದ್ದು ಪರಾರಿಯಾಗಿದ್ದ ಪೊಲೀಸರು ಮಹಿಳೆಯ ಶವದ ಮರಣೋತ್ತರ ಪರೀಕ್ಷೆ ನಡೆಸಿದಾಗ ಆಕೆ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದಾಗಿ ವರದಿ ಬಂದಿತ್ತು. ಅಂದಿನ ಎಸಿಪಿ ರಂಜಿತ್ ಕುಮಾರ್ ಬಂಡಾರು ನೇತೃತ್ವದಲ್ಲಿ ತನಿಖೆಯ ಜಾಡು ಹಿಡಿದ ಪೊಲೀಸರು ಪಾತೂರು ನಿವಾಸಿ ಅಶ್ರಫ್ ನನ್ನ ಬಂಧಿಸಿದ್ದರು.

ಕೊಲೆ ನಡೆದ ಕೆಲವೇ ದಿನಗಳ ಹಿಂದೆ ಅಶ್ರಫ್, ಕುಸುಮಾ ಅವರ ಮನೆಗೆ ಕೂಲಿ ಕೆಲಸಕ್ಕೆ ಬಂದಿದ್ದ ಬಾವಿಗೆ ಬಿದ್ದಿದ್ದ ಹೆಬ್ಬಾವು ತೆಗೆಯುವುದಕ್ಕೂ ಸಹಕರಿಸಿದ್ದ ಮಹಿಳೆ ಒಂಟಿಯಾಗಿರುವುದು, ಮನೆ ತುಂಬಾ ಅಡಿಕೆ ಬೆಳೆ ಇರುವುದನ್ನು ಗಮನಿಸಿ ಲಕ್ಷಾಂತರ ರೂಪಾಯಿ ಹಣ ಮನೆಯಲ್ಲಿ ಇರಬಹುದು ಎಂದು ಕಳ್ಳತನಕ್ಕೆ ಯೋಜನೆ ಹಾಕಿದ್ದ. ಅದರಂತೆ, ಮನೆಗೆ ನುಗ್ಗಿದ್ದ ಅಶ್ರಫ್ ಗೆ 15,000 ರೂ. ನಗದು ಸಿಕ್ಕಿತ್ತು. ಇಷ್ಟಕ್ಕೆ ಸುಮ್ಮನಾಗದ ಕಿರಾತಕ 53 ವರುಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕ್ರೌರ್ಯ ಮೆರೆದು ಆಕೆಯ ಬಳಿಯಿದ್ದ ಚಿನ್ನದ ಆಭರಣಗಳನ್ನ ದೋಚಿ ಪರಾರಿಯಾಗಿದ್ದ.

ತನಿಖೆ ನಡೆಸಿದ್ದ ಕೊಣಾಜೆ ಪೊಲೀಸರು ಆರೋಪಿ ಅಶ್ರಫ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸುಧೀರ್ಘ ವಿಚಾರಣೆ, ಸಾಕ್ಷಿಗಳ ಹೇಳಿಕೆ ಪರಿಗಣಿಸಿದ ನ್ಯಾಯಾಲಯ ಅಪರಾಧಿಗೆ ಶಿಕ್ಷೆ ಘೋಷಿಸಿದೆ. ಸಂತ್ರಸ್ತ ಮಹಿಳೆಯ ಪರ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್‌ ನಾಯಕ್‌ ವಾದಿಸಿದ್ದ ಸಾಕ್ಷಿಗಳನ್ನು ಹೇಳಿಕೆ ಆಧರಿಸಿ ಕಠಿಣ ಶಿಕ್ಷೆಗೆ ಒತ್ತಾಯ ಮಾಡಿದ್ದರು. 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್.ವಿ ಪ್ರಕರಣದಲ್ಲಿ ತೀರ್ಪು ಪ್ರಕಟಿಸಿದ್ದು ಆರೋಪಿ ಅಶ್ರಫ್ ಗೆ ಕಠಿಣ ಜೀವಾವಧಿ ಶಿಕ್ಷೆ ಮತ್ತು 3 ಲಕ್ಷ ರೂ. ದಂಡ ವಿಧಿಸಿದ್ದಾರೆ.

- Advertisement -

Related news

error: Content is protected !!