Thursday, May 2, 2024
spot_imgspot_img
spot_imgspot_img

ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ವಿರುದ್ಧ 10 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದ ಆರ್​ಸಿಬಿ

- Advertisement -G L Acharya panikkar
- Advertisement -

ಮುಂಬೈ: ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 16ನೇ ಮ್ಯಾಚ್​ನಲ್ಲಿ ಆರ್​ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ಟೀಂಗಳು ಮುಖಾಮುಖಿಯಾಗಿದ್ದವು.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ್ ರಾಯಲ್ಸ್ 177 ರನ್ ಗಳಿಸಿ ಆರ್​ಸಿಬಿಗೆ 178 ರನ್​ಗಳ ಗುರಿ ನೀಡಿತ್ತು. 178 ರನ್​ಗಳ ಬೆನ್ನು ಹತ್ತಿದ ಕೊಹ್ಲಿ ಮತ್ತು ದೇವದತ್​ ಪಡಿಕ್ಕಲ್ ಜೋಡಿ ರಾಜಸ್ಥಾನ್ ಬೌಲರ್​ಗಳ ಬೆವರಿಳಿಸಿದರು.

ದೇವದತ್ ಪಡಿಕ್ಕಲ್ 52 ಬಾಲ್ ಎದುರಿಸಿ 101 ರನ್​ ಗಳಿಸಿದ್ರೆ ಕ್ಯಾಪ್ಪನ್ ಕೊಹ್ಲಿ 47 ಬಾಲ್ ಎದುರಿಸಿ 72 ರನ್ ಗಳಿಸಿದ್ರು. 16.3 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 181 ರನ್ ದಾಖಲಿಸಿದ ಆರ್​ಸಿಬಿ ಗೆದ್ದು ಬೀಗಿತು. ಈವರೆಗೆ ಒಟ್ಟು 4 ಮ್ಯಾಚ್ ಆಡಿರುವ ಆರ್​ಸಿಬಿ ನಾಲ್ಕೂ ಮ್ಯಾಚ್​​ಗಳಲ್ಲಿ ಗೆಲುವು ಸಾಧಿಸಿದೆ.

- Advertisement -

Related news

error: Content is protected !!