Friday, June 26, 2026
spot_imgspot_img
spot_imgspot_img

ಇರಾನ್‌ನ ಇಂಧನ ಕೇಂದ್ರಗಳ ಮೇಲಿನ ದಾಳಿಯಿಂದ ಹಿಂದೆ ಸರಿದ ಟ್ರಂಪ್-ನಮ್ಮ ಕಠಿಣ ಎಚ್ಚರಿಕೆ ಬಳಿಕ ಟ್ರಂಪ್ ದಾಳಿಯಿಂದ ಹಿಂದೆ ಸರಿದಿದ್ದಾರೆ” ಎಂದ ಇರಾನ್ ರಾಯಭಾರಿ ಕಚೇರಿ

- Advertisement -
- Advertisement -

ವಾಷಿoಗ್ಟನ್: ಕಳೆದ ಎರಡು ದಿನಗಳಲ್ಲಿ ಅಮೆರಿಕಾ ಮತ್ತು ಇರಾನ್ ನಡುವೆ ನಡೆದ ಮಾತುಕತೆಗಳು ಫಲಪ್ರದವಾಗಿವೆ. ಆದ್ದರಿಂದ ಇರಾನ್‌ನ ಇಂಧನ ಕೇಂದ್ರಗಳ ಮೇಲಿನ ಅಮೆರಿಕದ ದಾಳಿಯನ್ನು ಐದು ದಿನಗಳವರೆಗೆ ಮುಂದೂಡಲು ಸೂಚಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಈ ಕುರಿತು ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್, ಇರಾನ್‌ ಜೊತೆ ನಡೆಯುತ್ತಿರುವ ಮಾತುಕತೆಗಳು ಫಲಪ್ರದವಾಗಿರುವ ಹಿನ್ನೆಲೆ ಇರಾನ್‌ನ ವಿದ್ಯುತ್ ಘಟಕಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲೆ ಯೋಜಿಸಿದ್ದ ಎಲ್ಲಾ ಸೇನಾ ದಾಳಿಗಳನ್ನು 5 ದಿನಗಳ ಕಾಲ ಮುಂದೂಡಲು ಸೂಚನೆ ನೀಡಿದ್ದೇನೆ. ಮುಂದಿನ ಮಾತುಕತೆಗಳ ಯಶಸ್ಸಿನ ಮೇಲೆ ಈ ನಿರ್ಧಾರ ಅವಲಂಬಿತವಾಗಿರುತ್ತದೆ ಎಂದು ಹೇಳಿದ್ದಾರೆ.

ಇರಾನಿನ ಪರಮಾಣು ಸ್ಥಾವರಗಳ ಮೇಲಿನ ದಾಳಿಗಳನ್ನು ವಿಳಂಬಗೊಳಿಸುವಂತೆ ಟ್ರಂಪ್ ಸೂಚನೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಕಾಬೂಲ್‌ನಲ್ಲಿರುವ ಇರಾನ್‌ ರಾಯಭಾರ ಕಚೇರಿ, ಇರಾನ್ ಕಠಿಣ ಎಚ್ಚರಿಕೆ ನೀಡಿದ ನಂತರ ಟ್ರಂಪ್ ದಾಳಿಯಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಿದೆ.

- Advertisement -

Related news

error: Content is protected !!