Friday, June 5, 2026
spot_imgspot_img
spot_imgspot_img

ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ- ಸುರಕ್ಷಿತವಾಗಿರುವಂತೆ ಭಾರತೀಯರಿಗೆ ಸಲಹೆ

- Advertisement -
- Advertisement -

ಮಧ್ಯಪ್ರಾಚ್ಯ ದೇಶಗಳಾದ ಇಸ್ರೆಲ್ ಹಾಗೂ ಇರಾನ್ ನಡುವಿನ ಸಂಘರ್ಷ ಭೀಕರ ಸ್ವರೂಪ ಪಡೆದುಕೊಂಡಿದ್ದು, ಯುದ್ದದ ಭೀತಿ ಜೋರಾಗಿದೆ. ಸದ್ಯ ಇಸ್ರೇಲ್ ಮೇಲೆ ಇರಾನ್ ಭೀಕರ ದಾಳಿ ನಡೆಸಿದೆ. ಇಸ್ರೇಲ್ ಮೇಲೆ 100ಕ್ಕೂ ಅಧಿಕ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಇರಾನ್ ಉಡಾಯಿಸಿದೆ. ಈ ಹಿನ್ನೆಲೆಯಲ್ಲಿ ಇಸ್ರೆಲ್‌ನಲ್ಲಿ ನೆಲೆಸಿರುವ ಭಾರತೀಯರಿಗೆ ಸುರಕ್ಷಿತವಾಗಿರುವಂತೆ ಭಾರತ ಸರ್ಕಾರ ಸಂದೇಶ ರವಾನಿಸಿದೆ.

ಜುಲೈ 31ರಂದು ಟೆಹ್ರಾನ್‌ನಲ್ಲಿ ಫೆಲೆಸ್ತೀನ್ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ನನ್ನು ಇಸ್ರೇಲ್ ಹತ್ಯೆ ಮಾಡಲಾಗಿತ್ತು. ಸೆಪ್ಟೆಂಬರ್ 27 ರಂದು ಬೈರುತ್, ಲೆಬನಾನ್‌ನಲ್ಲಿ ತನ್ನ ಬೃಹತ್ ವೈಮಾನಿಕ ದಾಳಿಯಲ್ಲಿ, ಇಸ್ರೇಲ್ ಇರಾನಿನ ಬ್ರಿಗೇಡಿಯರ್ ಜನರಲ್ ಅಬ್ಬಾಸ್ ನಿಲ್ಫೊರೌಶನ್ ಎಂಬಾತನನ್ನೂ ಹತ್ಯೆ ಮಾಡಿತ್ತು. ಇದಕ್ಕೆ ಪ್ರತಿಕಾರವಾಗಿ ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸಿದೆ ಎನ್ನಲಾಗಿದೆ ಇಸ್ರೇಲ್ ವಿರುದ್ಧ ಪ್ರತೀಕಾರ ತೀರಿಸುವ ನಿರ್ಧಾರವನ್ನು ಇರಾನ್‌ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿ (SNSC) ಮಾಡಿದೆ ಅಂತ ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.

ಇನ್ನೊಂದೆಡೆ ಯುದ್ಧದ ತೀವ್ರತೆ ಹೆಚ್ಚಾಗಿರುವುದರಿಂದ ಇಸ್ರೇಲ್‌ಗೆ ವಿವಿಧ ಕಾರಣಗಳಿಗಾಗಿ ತೆರಳಿರುವ ಭಾರತೀಯರು ಸುರಕ್ಷಿತ ಸ್ಥಳಗಳಲ್ಲಿ ನೆಲೆಸುವಂತೆ. ತಮ್ಮ ಸುರಕ್ಷತೆ ಕಾಯ್ದುಕೊಳ್ಳುವಂತೆ ಭಾರತ ಸರ್ಕಾರ ಸಲಹೆ ನೀಡಿದೆ.

- Advertisement -

Related news

error: Content is protected !!